ಜೀವನದಲ್ಲಿ ಒಮ್ಮೆ ಜಾಕ್ ಪಾಟ್ ಲಾಟರಿ ಹೊಡೆಯುವುದೇ ಕನಸಿನ ಮಾತು. ಇನ್ನು ಎರಡನೇ ಬಾರಿ ಹೊಡೆಯವುದೆಂದರೆ ಅಸಾಧ್ಯವೇ ಸರಿ ಎಂದು ಯೋಚಿಸುತ್ತಿರುವವರಿಗೆ ಇಲ್ಲೊಬ್ಬ ಅದನ್ನು ಸುಳ್ಳಾಗಿಸಿದ್ದಾನೆ.
ಹೌದು , ಆಗ್ನೇಯ ಮಿಷಿಗನ್ ಪ್ರಾಂತ್ಯದಲ್ಲಿ ವ್ಯಕ್ತಿಯೊಬ್ಬ ತನ್ನ ಲಕ್ಕಿ ನಾಣ್ಯ ಬಳಸಿಕೊಂಡು ಲಾಟರಿಯನ್ನು ಸ್ಕ್ರಾಚ್ ಮಾಡಿದ್ದರಿಂದ 7 ಕೋಟಿ ರೂ. ಮೌಲ್ಯದ ಲಾಟರಿಯನ್ನು ಕ್ಲಾರ್ಕ್ ಗೆದ್ದಿದ್ದಾನೆ ಎಂದು ತಿಳಿದುಬಂದಿದೆ.
ಸುಮಾರು 10 ವರ್ಷದ ಹಿಂದೆ ಕ್ಲಾರ್ಕ್ ತಾತ ಈ ಲಕ್ಕಿ ನಾಣ್ಯವನ್ನು ಫಿಷಿಂಗ್ಗೆಂದು ಹೋದಾಗ ನೀಡಿದ್ದರಂತೆ. ಬಳಿಕ ಅದನ್ನು ಬಳಸಿಕೊಂಡು 2007ರಲ್ಲಿ ಲಾಟರಿಯಲ್ಲಿ ನಾಲ್ಕು ಮಿಲಿಯನ್ ಡಾಲರ್ ಗೆದಿದ್ದರಂತೆ. ಇದೀಗ ಅದೇ ನಾಣ್ಯದಿಂದ ಇನ್ನೊಮ್ಮೆ ಈ ಮೊತ್ತ ಗೆದ್ದಿದ್ದಾರೆ.
ಈ ಬಗ್ಗೆ ಮಾತನಾಡಿರುವ ಕ್ಲಾರ್ಕ್, ಇನ್ನೊಮ್ಮೆ ಜಾಕ್ಪಾಟ್ನಲ್ಲಿ ಗೆಲ್ಲುತ್ತೇನೆ ಎಂದುಕೊಂಡಿರಲಿಲ್ಲ. ಜೀವನದಲ್ಲಿ ಹಲವು ಏರುಪೇರು ನೋಡಿರುವ ನನಗೆ ಇದು ಅತ್ಯಂತ ಖುಷಿಯ ವಿಚಾರ ಎಂದಿದ್ದಾರೆ.