ಭದ್ರತಾ ಸಿಬ್ಬಂದಿಯೊಬ್ಬರು ಊಟಕ್ಕೆಂದು ಬರೀ ಅನ್ನದ ಜೊತೆಗೆ ಹಸಿ ಈರುಳ್ಳಿ ಹಾಗೂ ಶುಂಠಿಯನ್ನೇ ನಂಚಿಕೊಂಡು ತಿನ್ನುತ್ತಿರುವ ಚಿತ್ರವೊಂದು ವೈರಲ್ ಆಗಿದ್ದು, ನೆಟ್ಟಿಗರು ಇದನ್ನು ಕಂಡು ಬೇಸರಪಟ್ಟುಕೊಂಡಿದ್ದಾರೆ.
ಮಲೇಷ್ಯಾದ ಪೇಸ್ಬುಕ್ ಬಳಕೆದಾರರೊಬ್ಬರು ಈ ಚಿತ್ರವನ್ನು ಶೇರ್ ಮಾಡಿದ್ದಾರೆ. ಹೊತ್ತಿನ ಊಟಕ್ಕೆ ಈ ರೀತಿಯ ಕೊರತೆ ಎದುರಿಸುತ್ತಿರುವ ಭದ್ರತಾ ಸಿಬ್ಬಂದಿಯ ಮನಕಲಕುವ ಎರಡು ಚಿತ್ರಗಳನ್ನು ಅವರು ಶೇರ್ ಮಾಡಿದ್ದರು.
ಬಂಪರ್….! ಕೇವಲ 1 ರೂ.ಗೆ ಸಿಗ್ತಿದೆ ಈ ಕಂಪನಿ ಉತ್ಪನ್ನ
ಮೂಲತಃ ಆತನಿಗೆ ಇಷ್ಟು ಅಲ್ಪಾಹಾರ ಸೇವಿಸುವಷ್ಟು ಪರಿಸ್ಥಿತಿ ವಿಷಮವಾಗಿಲ್ಲ. ಎಲ್ಲರಂತೆ ತಾನೂ ಸಹ ದುಡಿದರೂ, ಸಾಧ್ಯವಾದಷ್ಟನ್ನು ಕುಟುಂಬಕ್ಕೆಂದು ಉಳಿತಾಯ ಮಾಡುವ ಈತ ತನಗಾಗಿ ಬಹಳ ಕಡಿಮೆ ಮೊತ್ತವನ್ನು ವಿನಿಯೋಗಿಸುತ್ತಾರೆ. ತಮ್ಮ ಸಂಬಳದ 90% ಹಣವನ್ನು ಹಳ್ಳಿಯಲ್ಲಿರುವ ತಮ್ಮ ಕುಟುಂಬದ ವಿನಿಯೋಗಕ್ಕೆ ಕಳುಹಿಸುತ್ತಾರೆ ಈ ಗಾರ್ಡ್.
https://www.facebook.com/apitlid/posts/4025197217518780