ಜಪಾನ್ನ ಈಶಾನ್ಯ ಕರವಾಳಿಯಲ್ಲಿರುವ ಫುಕುಶಿಮಾ ನಗರದಲ್ಲಿ ಪ್ರಬಲವಾದ ಭೂಕಂಪನ ಸಂಭವಿಸಿದೆ ಎಂದು ಅಲ್ಲಿನ ಹವಾಮಾನ ಇಲಾಖೆ ತಿಳಿಸಿದೆ. ಭೂಕಂಪನದ ತೀವ್ರತೆಯು ರಿಕ್ಟರ್ ಮಾಪಕದಲ್ಲಿ 7.1ರಷ್ಟಿದೆ.
ರಾಜಧಾನಿ ಟೋಕಿಯೋ ದಲ್ಲೂ ಸಹ ಭೂಮಿ ಕಂಪಿಸಿದೆ. ಸದ್ಯಕ್ಕೆ ಸುನಾಮಿಯ ಅಪಾಯಗಳೇನೂ ಇಲ್ಲವೆಂದು ಎನ್ಎಚ್ಕೆ ಟಿವಿ ವಾಹಿನಿ ತಿಳಿಸಿದೆ. ಭೂಕಂಪನದ ಕೇಂದ್ರವು ಸಮುದ್ರ ತಳಕ್ಕಿಂತ 60 ಕಿಮೀ ಆಳದಲ್ಲಿ ಕಂಡು ಬಂದಿದೆ.
ಅಮೆಜಾನ್ ಇಂಡಿಯಾದಿಂದ ಐಫೋನ್ ಉತ್ಪನ್ನಗಳ ಮೇಲೆ ಭರ್ಜರಿ ವಿನಾಯಿತಿ….!
ಈ ಪ್ರದೇಶಗಳಲ್ಲಿರುವ ಪರಮಾಣು ಸ್ಥಾವರಗಳ ಸುರಕ್ಷತೆ ಬಗ್ಗೆ ಇನ್ನಷ್ಟು ಹೆಚ್ಚಿನ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.
ಭೂಕಂಪನದ ಪರಿಣಾಮದಿಂದ 8,60,000 ಮನೆಗಳಲ್ಲಿ ವಿದ್ಯುತ್ ಕಡಿತವಾಗಿದೆ ಎಂದು ಟೋಕ್ಯೋ ವಿದ್ಯುತ್ ಸರಬರಾಜು ಕಂಪನಿ ತಿಳಿಸಿದೆ. ರೈಲು ಸೇವೆಯಲ್ಲೂ ಸಹ ಭೂಕಂಪನದ ಕಾರಣ ವ್ಯತ್ಯಯಗಳು ಕಂಡು ಬಂದಿವೆ.