alex Certify ಪತ್ತೆಯಾಯ್ತು ಅಪರೂಪದ ಊಸರವಳ್ಳಿ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪತ್ತೆಯಾಯ್ತು ಅಪರೂಪದ ಊಸರವಳ್ಳಿ….!

ಈ ವರ್ಷ ಹವಾಮಾನ ಬದಲಾವಣೆಯಾಗಿದ್ದಕ್ಕೋ ಇಲ್ವೇ ಮತ್ಯಾವ ಕಾರಣಕ್ಕೋ ಗೊತ್ತಿಲ್ಲ. ಆದರೆ ಈ ಬಾರಿ ಅಳಿವನಂಚಿನಲ್ಲಿದ್ದ ಅಥವಾ ಸಂಪೂರ್ಣ ನಾಶವಾಗಿದೆ ಎಂದು ಭಾವಿಸಿದ್ದ ಅನೇಕ ಜೀವಿಗಳು ಪರಿಸರದಲ್ಲಿ ಕಾಣಿಸಿಕೊಳ್ತಿವೆ.

ಈ ಮಾತಿಗೆ ಉದಾಹರಣೆ ಎಂಬಂತೆ ಮಡಗಾಸ್ಕನ್​ ಊಸರವಳ್ಳಿ ಒಂದು ಶತಮಾನಕ್ಕೂ ಹೆಚ್ಚು ವರ್ಷಗಳ ಹಿಂದೆಯೇ ಕಾಣೆಯಾಗಿದೆ ಅಂತಾ ಭಾವಿಸಲಾಗಿತ್ತು. ಆದರೆ ಇದೀಗ ಈ ಸರೀಸೃಪವನ್ನ ಸಂಶೋಧಕರು ಮತ್ತೊಮ್ಮೆ ಶೋಧಿಸಿದ್ದಾರೆ. ಆಫ್ರಿಕಾದ ವಾಯುವ್ಯ ಭಾಗದ ದ್ವೀಪವೊಂದರಲ್ಲಿ ಈ ಜಾತಿಯ ಊಸರವಳ್ಳಿ ಪತ್ತೆಯಾಗಿದೆ. ಮಡಗಾಸ್ಕರ್ ಹಾಗೂ ಜರ್ಮನ್​ ವಿಜ್ಞಾನಿಗಳ ತಂಡ ಈ ಸರೀಸೃಪಗಳನ್ನ ಕಂಡುಹಿಡಿದಿವೆ.

ಮಡಗಾಸ್ಕನ್​ ಊಸರವಳ್ಳಿಯ ಫೋಟೋವನ್ನ ಗ್ಲೋಬಲ್​ ವನ್ಯಜೀವಿ ಸಂರಕ್ಷಣೆ ತನ್ನ ಟ್ವಿಟರ್​​ನಲ್ಲಿ ಹಂಚಿಕೊಂಡಿದೆ. ಅಕ್ಟೋಬರ್​ 30ರಂದು ವೊಯೆಲೋಟ್​ಜ್ಕೇವ್​ನಲ್ಲಿ ಪತ್ತೆ ಮಾಡಿದ್ದೇವೆ ಅಂತಾ ಮಾಹಿತಿ ಹಂಚಿಕೊಂಡಿದೆ.

ಲ್ಯಾಬೋರ್ಡ್ ಊಸರವಳ್ಳಿ ಹಾಗೂ ಮಡಗಾಸ್ಕನ್​ ಊಸರವಳ್ಳಿ ಪ್ರಬೇಧಗಳು ನಿಕಟ ಸಂಬಂಧ ಹೊಂದಿವೆ. ಈ ಎರಡೂ ಪ್ರಬೇಧಗಳು ಮಳೆಗಾಲದಲ್ಲಿ ಮೊಟ್ಟೆಯೊಡೆದು ಬೇಗನೆ ಬೆಳೆಯುತ್ತವೆ. ಹಾಗೂ ಕೆಲವೇ ತಿಂಗಳುಗಳ ಕಾಲ ಬದುಕಿರುತ್ತವೆ ಅಂತಾ ತಜ್ಞರು ಮಾಹಿತಿ ನೀಡಿದ್ದಾರೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...