ಈ ವರ್ಷ ಹವಾಮಾನ ಬದಲಾವಣೆಯಾಗಿದ್ದಕ್ಕೋ ಇಲ್ವೇ ಮತ್ಯಾವ ಕಾರಣಕ್ಕೋ ಗೊತ್ತಿಲ್ಲ. ಆದರೆ ಈ ಬಾರಿ ಅಳಿವನಂಚಿನಲ್ಲಿದ್ದ ಅಥವಾ ಸಂಪೂರ್ಣ ನಾಶವಾಗಿದೆ ಎಂದು ಭಾವಿಸಿದ್ದ ಅನೇಕ ಜೀವಿಗಳು ಪರಿಸರದಲ್ಲಿ ಕಾಣಿಸಿಕೊಳ್ತಿವೆ.
ಈ ಮಾತಿಗೆ ಉದಾಹರಣೆ ಎಂಬಂತೆ ಮಡಗಾಸ್ಕನ್ ಊಸರವಳ್ಳಿ ಒಂದು ಶತಮಾನಕ್ಕೂ ಹೆಚ್ಚು ವರ್ಷಗಳ ಹಿಂದೆಯೇ ಕಾಣೆಯಾಗಿದೆ ಅಂತಾ ಭಾವಿಸಲಾಗಿತ್ತು. ಆದರೆ ಇದೀಗ ಈ ಸರೀಸೃಪವನ್ನ ಸಂಶೋಧಕರು ಮತ್ತೊಮ್ಮೆ ಶೋಧಿಸಿದ್ದಾರೆ. ಆಫ್ರಿಕಾದ ವಾಯುವ್ಯ ಭಾಗದ ದ್ವೀಪವೊಂದರಲ್ಲಿ ಈ ಜಾತಿಯ ಊಸರವಳ್ಳಿ ಪತ್ತೆಯಾಗಿದೆ. ಮಡಗಾಸ್ಕರ್ ಹಾಗೂ ಜರ್ಮನ್ ವಿಜ್ಞಾನಿಗಳ ತಂಡ ಈ ಸರೀಸೃಪಗಳನ್ನ ಕಂಡುಹಿಡಿದಿವೆ.
ಮಡಗಾಸ್ಕನ್ ಊಸರವಳ್ಳಿಯ ಫೋಟೋವನ್ನ ಗ್ಲೋಬಲ್ ವನ್ಯಜೀವಿ ಸಂರಕ್ಷಣೆ ತನ್ನ ಟ್ವಿಟರ್ನಲ್ಲಿ ಹಂಚಿಕೊಂಡಿದೆ. ಅಕ್ಟೋಬರ್ 30ರಂದು ವೊಯೆಲೋಟ್ಜ್ಕೇವ್ನಲ್ಲಿ ಪತ್ತೆ ಮಾಡಿದ್ದೇವೆ ಅಂತಾ ಮಾಹಿತಿ ಹಂಚಿಕೊಂಡಿದೆ.
ಲ್ಯಾಬೋರ್ಡ್ ಊಸರವಳ್ಳಿ ಹಾಗೂ ಮಡಗಾಸ್ಕನ್ ಊಸರವಳ್ಳಿ ಪ್ರಬೇಧಗಳು ನಿಕಟ ಸಂಬಂಧ ಹೊಂದಿವೆ. ಈ ಎರಡೂ ಪ್ರಬೇಧಗಳು ಮಳೆಗಾಲದಲ್ಲಿ ಮೊಟ್ಟೆಯೊಡೆದು ಬೇಗನೆ ಬೆಳೆಯುತ್ತವೆ. ಹಾಗೂ ಕೆಲವೇ ತಿಂಗಳುಗಳ ಕಾಲ ಬದುಕಿರುತ್ತವೆ ಅಂತಾ ತಜ್ಞರು ಮಾಹಿತಿ ನೀಡಿದ್ದಾರೆ.