ನಾಯಿಗಳ ನಿಯತ್ತು, ಅವುಗಳ ಸ್ವಾಮಿನಿಷ್ಟೆಗೆ ಬೇರೆ ಸರಿಸಾಟಿ ಅನ್ನೋದೇ ಇಲ್ಲ. ಎಷ್ಟೋ ಬಾರಿ ಈ ಮುಗ್ದ ಪ್ರಾಣಿಗಳು ತನ್ನ ಪ್ರಾಣವನ್ನೇ ಪಣಕ್ಕಿಟ್ಟು ಮಾಲೀಕನ ಜೀವ ಕಾಪಾಡಿದ್ದೂ ಉಂಟು.
ಕೆರಿಬಿಯನ್ ರಾಷ್ಟ್ರಗಳಲ್ಲೊಂದಾದ ಡೊಮಿನಿಕನ್ ರಿಪಬ್ಲಿಕ್ನಲ್ಲಿ ಕೊರೊನಾ ಹೆಚ್ಚಳ ಹಿನ್ನೆಲೆ ಕರ್ಫ್ಯೂ ಜಾರಿ ಮಾಡಲಾಗಿತ್ತು. ಕರ್ಫ್ಯೂ ನಿಯಮ ಉಲ್ಲಂಘನೆ ಮಾಡಿದ್ದರಿಂದ ವ್ಯಕ್ತಿಯೊಬ್ಬನನ್ನ ಬಂಧಿಸಲಾಗಿತ್ತು.
ವ್ಯಕ್ತಿಯ ಕೈಗೆ ಕೋಳ ತೊಡಿಸಿದ ಪೊಲೀಸರು ಆತನನ್ನ ಕರೆದುಕೊಂಡು ಹೋಗಲು ರೆಡಿಯಾಗ್ತಿದ್ದಂತೆ ನಾಯಿ ತನ್ನ ಮಾಲೀಕನ ಶರ್ಟ್ನ್ನು ಎಳೆದಿದೆ. ಮಾಲೀಕ ಹಾಗೂ ನಾಯಿಯ ಬಾಂಧವ್ಯ ಕಂಡ ಪೊಲೀಸರು ಆ ವ್ಯಕ್ತಿಯನ್ನ ಬಿಡುಗಡೆ ಮಾಡಿದ್ದಾರೆ.