alex Certify ಪಶುವೈದ್ಯರ ಬಳಿ ಹೋಗಿ ಮನೆ ದಾರಿ ತೋರಿಸಲು ಕೇಳಿಕೊಂಡ ಶ್ವಾನ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಶುವೈದ್ಯರ ಬಳಿ ಹೋಗಿ ಮನೆ ದಾರಿ ತೋರಿಸಲು ಕೇಳಿಕೊಂಡ ಶ್ವಾನ…!

ತನ್ನ ಮನೆಯ ದಾರಿ ಕಾಣದೇ ಹೋದ ಬಳಿಕ ತನ್ನನ್ನು ಶುಶ್ರುಷೆ ಮಾಡುತ್ತಿದ್ದ ಪಶುವೈದ್ಯರ ಕ್ಲಿನಿಕ್ ಬಾಗಿಲನ್ನು ತಟ್ಟುತ್ತಿರುವ ಶ್ವಾನವೊಂದರ ವಿಡಿಯೋ ವೈರಲ್ ಆಗಿದ್ದು, ನಾಯಿಯ ಬುದ್ಧಿವಂತಿಕೆಗೆ ನೆಟ್ಟಿಗರು ಫಿದಾ ಆಗಿದ್ದಾರೆ.

ಥಾಯ್ಲೆಂಡ್‌ನ ಸಮುತ್‌ ಪ್ರಕಾನ್‌ನ ಮುವಾಂಗ್‌ ಎಂಬಲ್ಲಿರುವಪಶು ಕ್ಲಿನಿಕ್ ‌ನಲ್ಲಿ ಈ ಘಟನೆ ನಡೆದಿದೆ. ಕ್ಲಿನಿಕ್‌ನ ಸಹಾಯಕಿ ಏನಾಗುತ್ತಿದೆ ಎಂದು ಬಾಗಿಲ ಬಳಿ ಬಂದಾಗ, ಆ ಶ್ವಾನವು ಬಾಗಿಲನ್ನು ಮುಂಗಾಲುಗಳಿಂದ ತಟ್ಟುತ್ತಾ, ತನ್ನ ಸಮಸ್ಯೆಯನ್ನು ತನ್ನದೇ ಭಾಷೆಯಲ್ಲಿ ಹೇಳಿಕೊಂಡಿದೆ.

ಕ್ಲಿನಿಕ್ ಒಳಗೆ ಬರಲು ಬಿಟ್ಟ ಕೂಡಲೇ ಪಶುವೈದ್ಯ ಸೆಂಗ್‌ಡುಯೆನ್ ಚೊಟೆಪಾನಸ್‌ರನ್ನು ನೋಡಿದ ಶ್ವಾನ ಬಹಳ ಖುಷಿಯಾಗಿದೆ. ಫೈಲ್ ತೆರೆದು ನೋಡಿದ ಬಳಿಕ, ಆ ನಾಯಿಯು ಖುದ್ದು ತಾನೇ ಚಿಕಿತ್ಸೆ ನೀಡಿದ್ದ ನಾಯಿಯಾಗಿದೆ ಎಂದು ವೈದ್ಯರಿಗೆ ತಿಳಿದುಬಂದಿದೆ. ಕೂಡಲೇ ಶ್ವಾನದ ಕುಟುಂಬದವರಿಗೆ ಕರೆ ಮಾಡಿದ ವೈದ್ಯೆ, ತಮ್ಮಲ್ಲಿಗೆ ಬಂದು ನಾಯಿಯನ್ನು ಕರೆದುಕೊಂಡು ಹೋಗಲು ತಿಳಿಸಿದ್ದಾರೆ.

มีเรื่องเล่าจากคลินิก มีน้องหมาพันธุ์ไทยหลังอานหลงทางหาทางกลับบ้านไม่เจอ น้องหมาตัวนี้เคยมาฉีดวัคซีนที่คลินิกประจำตั้งแต่1เดือนตอนนี้น้องอายุประมาณ4-5เดือน น้องผู้ช่วยเห็นน้องประมาณเกือบๆ2ทุ่ม เดินไปเดินมา แต่จำน้องได้เพราะมาประจำ น้องมาเห่าเรียกที่ประตูเหมือนอยากจะเข้ามาในคลินิก ดูจากท่าทางกลับบ้านไม่ถูกคุณหมอเลยให้น้องผู้ช่วยเปิดประตูให้น้องเข้ามาในคลินิกน้องดีใจมาก และโทรหาเจ้าของให้มารับน้อง เจ้าของหาน้องตั้งแต่15.00น เจ้าของดีใจน้องหมาก็ดีใจที่เจอกัน ❤️❤️❤️ ทางคลิกก็ดีใจ น่ารักและฉลาดมากค่ะ

Posted by พุทธรักษา รักษาสัตว์ ตลาดสดนิคมบางปู on Tuesday, July 7, 2020

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...