
ವರದಿಗಳ ಪ್ರಕಾರ ಸರಿಸೃಪದಲ್ಲಿ ಈ ವಿಶೇಷವಾದ ಹೊಳೆಯುವ ರೀತಿಯ ಪಟ್ಟೆಗಳಿಂದಾಗಿ ಈ ಹಲ್ಲಿಗಳು ಇತರೆ ಹಲ್ಲಿಗಳಿಗಿಂತ ಭಿನ್ನವಾಗಿದೆ. ಮಾತ್ರವಲ್ಲದೇ ಈ ವಿಶೇಷ ಗುಣಗಳಿಂದಾಗಿ ಪರಭಕ್ಷಕ ಜೀವಿಗಳಿಂದಲೂ ತಮ್ಮನ್ನ ತಾವು ರಕ್ಷಿಸಿಕೊಳ್ಳಲು ಸಾಧ್ಯವಾಗುತ್ತೆ.
ಈ ನಿರ್ದಿಷ್ಟ ಪ್ರಭೇದ ಅರೆ ಪಾರದರ್ಶಕ ಚರ್ಮವನ್ನ ಹೊಂದಿದೆ. ಇವುಗಳ ದೇಹದಲ್ಲಿನ ಮೂಳೆಗಳು ನೇರಳಾತೀತ ಬೆಳಕಿನಲ್ಲಿ ಹೊಳೆಯುತ್ತೆ. ಆಸ್ಟ್ರೇಲಿಯಾದಲ್ಲೂ ಕೆಲ ದಿನಗಳ ಹಿಂದೆ ನಡೆಸಿದ ಸಂಶೋಧನೆಯಲ್ಲಿ ಹೊಳೆಯುವ ಗೋಸುಂಬೆಗಳು ಕಾಣಸಿಕ್ಕಿದ್ದವು.