alex Certify ವಾಶಿಂಗ್ ಮಷೀನ್‌ ನಲ್ಲಿದ್ದ ಅನಿರೀಕ್ಷಿತ ಅತಿಥಿ ನೋಡಿ ಬೆಚ್ಚಿಬಿದ್ದ ಯುವತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಾಶಿಂಗ್ ಮಷೀನ್‌ ನಲ್ಲಿದ್ದ ಅನಿರೀಕ್ಷಿತ ಅತಿಥಿ ನೋಡಿ ಬೆಚ್ಚಿಬಿದ್ದ ಯುವತಿ

ಲಂಡನ್‌ನ ತಾಶಾ ಪ್ರಯಾಗ್ ಹೆಸರಿನ ಮಹಿಳೆಯೊಬ್ಬರು ತಮ್ಮ ಮನೆಗೆ ಬಂದ ಅನಿರೀಕ್ಷಿತ ಅತಿಥಿಯೊಬ್ಬರು ಬಂದು ವಾಶಿಂಗ್ ಮಷೀನ್‌ ಒಳಗಿನಿಂದ ಇಣುಕಿ ನೋಡುತ್ತಿದ್ದದ್ದನ್ನು ಕಂಡು ಶಾಕ್ ಆಗಿದ್ದಾರೆ. ಆ ಅತಿಥಿ ಯಾರೆಂದರೆ — ನರಿ…!

ಸೈಡ್‌ಲೋಡ್‌ನ ಈ ಮಷಿನ್ ಒಳಗೆ ಕುಳಿತಿದ್ದ ನರಿಯ ಚಿತ್ರವನ್ನು ಸೆರೆ ಹಿಡಿದು ಟ್ವಿಟರ್‌ನ ತನ್ನ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ ನತಾಶಾ. ನತಾಶಾ ಹಾಗೂ ಆಕೆಯ ಸಂಗಾತಿ ಆಡಮ್ ತಮ್ಮ ಕಾರಿನಿಂದ ಬ್ಯಾಗುಗಳನ್ನು ಅನ್ಲೋಡ್ ಮಾಡುತ್ತಿದ್ದ ವೇಳೆ ಈ ನರಿ ಮನೆಯೊಳಗೆ ಹೊಕ್ಕಿರಬಹುದು ಎನ್ನಲಾಗಿದೆ.

ಮನೆಯೊಳಗೆ ಅವಿತುಕೊಳ್ಳಲು ಸುರಕ್ಷಿತ ಜಾಗವೊಂದನ್ನು ಹುಡುಕುತ್ತಿದ್ದ ನರಿ ಕಣ್ಣಿಗೆ ಬಿದ್ದಿDE ವಾಶಿಂಗ್ ಮಷೀನ್. ನತಾಶಾರನ್ನು ನೋಡಿದ ಕೂಡಲೇ ಮನೆಯಿಂದ ಆಚೆ ಓಡಿ ಹೋಗುವ ಮುನ್ನ ನರಿಯ ಚಿತ್ರವನ್ನು ಸೆರೆ ಹಿಡಿಯಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...