ಲಂಡನ್:ಪಶ್ಚಿಮ ಲಂಡನ್ ನ ಹೆವ್ಲೊಕ್ ರಸ್ತೆಗೆ ಶೀಘ್ರದಲ್ಲಿ ಭಾರತೀಯ ಸಂತ ಗುರು ನಾನಕ್ ಅವರ ಹೆಸರನ್ನಿಡಲಾಗುತ್ತದೆ. ಗುರು ನಾನರ್ ಜಯಂತಿಯ ದಿನವಾದ ಸೋಮವಾರ ಎಲ್ಲಿಂಗ್ ಕೌನ್ಸಿಲ್ ನ ಅಧಿಕಾರಿಗಳು ಈ ಕುರಿತು ಮಾಹಿತಿ ನೀಡಿದ್ದಾರೆ.
ಅಗತ್ಯ ಕಾರ್ಯ ವಿಧಾನದ ಬಳಿಕ 2021 ರಲ್ಲಿ ಅಧಿಕೃತವಾಗಿ ರಸ್ತೆಗೆ ಮರು ನಾಮಕರಣ ನಡೆಯಲಿದೆ. ಸದ್ಯ ಈ ರಸ್ತೆಗೆ ಇದುವರೆಗೆ 1857 ರ ಭಾರತೀಯ ದಂಗೆಯಲ್ಲಿ ಬ್ರಿಟಿಷ್ ಸೇನೆಯ ಜನರಲ್ ಆಗಿದ್ದ ಹೆನ್ರಿ ವೆವ್ಲೊಕ್ ಅವರ ಹೆಸರಿತ್ತು.
ಲಂಡನ್ ನಲ್ಲಿರುವ ಅತಿ ದೊಡ್ಡ ಗುರುದ್ವಾರ ಶ್ರೀ ಗುರು ಸಿಂಗ್ ಸಭಾ ಇದೇ ರಸ್ತೆಯಲ್ಲಿದೆ. ಅತಿ ಹೆಚ್ಚು ಸಿಖ್ ಜನಸಂಖ್ಯೆ ಇರುವ ಪ್ರದೇಶ ಇದಾಗಿದೆ. ಈ ವರ್ಷ ನಡೆದ “ದ ಬ್ಲ್ಯಾಕ್ ಲೈವ್ಸ್ ಮ್ಯಾಟರ್” ಸಂದರ್ಭದಲ್ಲಿ ಈ ವಿಷಯ ಪ್ರಸ್ತಾಪವಾಗಿತ್ತು.
https://twitter.com/rish_offiziele/status/1333281550817890306?ref_src=twsrc%5Etfw%7Ctwcamp%5Etweetembed%7Ctwterm%5E1333281550817890306%7Ctwgr%5E%7Ctwcon%5Es1_&ref_url=https%3A%2F%2Fwww.news18.com%2Fnews%2Fbuzz%2Flondons-havelock-road-known-for-its-sikh-population-to-be-renamed-as-guru-nanak-road-3130493.html