alex Certify ಬೋರಾದ ಲಾಕ್‌ಡೌನ್: ಮನೆಯಲ್ಲೇ ಸಿನಿಮಾ ಹಾಲ್ ಸೃಷ್ಟಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೋರಾದ ಲಾಕ್‌ಡೌನ್: ಮನೆಯಲ್ಲೇ ಸಿನಿಮಾ ಹಾಲ್ ಸೃಷ್ಟಿ…!

ಕೋವಿಡ್-19 ಲಾಕ್‌ಡೌನ್‌ ಕಾರಣದಿಂದ ವಿಶ್ವದ ಕೆಲ ಭಾಗಗಳಲ್ಲಿ ಲಾಕ್‌ಡೌನ್‌ ಇದ್ದು, ಜನರಿಗೆ ತಮ್ಮ ಮೆಚ್ಚಿನ ಟೈಂ ಪಾಸ್ ಚಟುವಟಿಕೆಗಳಲ್ಲಿ ಭಾಗಿಯಾಗಲು ಅವಕಾಶ ಇಲ್ಲದಂತಾಗಿದೆ.

ಸಿನೆಮಾ ಥಿಯೇಟರ್‌ಗಳು ಮುಚ್ಚಲ್ಪಟ್ಟು ಹತ್ತು ತಿಂಗಳುಗಳೇ ಕಳೆದಿರುವ ಈ ಸಂದರ್ಭದಲ್ಲಿ ಚಿತ್ರ ನಿರ್ಮಾಪಕ ಟಾಮ್‌ ಕಿಂಗ್‌ಸ್ಲೇ ತಮ್ಮ ಮನೆಯಲ್ಲೇ ಮಿನಿ ಚಿತ್ರಮಂದಿರ ಮಾಡಿಕೊಂಡಿದ್ದಾರೆ.

ತಮ್ಮ ಲ್ಯಾಪ್ಟಾಪ್‌ ಸುತ್ತಲೂ ಪುಟಾಣಿ ಸಿನಿಮಾ ಹಾಲ್‌ನಂಥ ಸೆಟ್ಟಿಂಗ್ ಮಾಡಿಕೊಂಡಿರುವ ಟಾಮ್‌, ’2001: ಎ ಸ್ಪೇಸ್ ಒಡಿಸಿ’ ಲ್ಯಾಪ್ಟಾಪ್‌ನಲ್ಲಿ ಬಿತ್ತರಿಸುತ್ತಿರುವ ಫೋಟೋ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾರೆ.

“ಹಿರಿತೆರೆಯ ಅನುಭವವನ್ನು ಮರುಸೃಷ್ಟಿ ಮಾಡಲೆಂದು ನನ್ನ ಲ್ಯಾಪ್ಟಾಪ್‌ನಲ್ಲೇ ’ಸ್ಪೆಷಲ್ ಲಾಕ್‌ಡೌನ್ ಸಿನಿಮಾ’ ಸೃಷ್ಟಿ ಮಾಡಿದ್ದೇನೆ” ಎಂದು ಟ್ವೀಟ್ ಮಾಡಿದ್ದಾರೆ ಟಾಮ್.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...