ಕೋವಿಡ್-19 ಲಾಕ್‌ಡೌನ್ ಕಾರಣದಿಂದ ವಿಶ್ವದ ಕೆಲ ಭಾಗಗಳಲ್ಲಿ ಲಾಕ್‌ಡೌನ್ ಇದ್ದು, ಜನರಿಗೆ ತಮ್ಮ ಮೆಚ್ಚಿನ ಟೈಂ ಪಾಸ್ ಚಟುವಟಿಕೆಗಳಲ್ಲಿ ಭಾಗಿಯಾಗಲು ಅವಕಾಶ ಇಲ್ಲದಂತಾಗಿದೆ.
ಸಿನೆಮಾ ಥಿಯೇಟರ್‌ಗಳು ಮುಚ್ಚಲ್ಪಟ್ಟು ಹತ್ತು ತಿಂಗಳುಗಳೇ ಕಳೆದಿರುವ ಈ ಸಂದರ್ಭದಲ್ಲಿ ಚಿತ್ರ ನಿರ್ಮಾಪಕ ಟಾಮ್ ಕಿಂಗ್‌ಸ್ಲೇ ತಮ್ಮ ಮನೆಯಲ್ಲೇ ಮಿನಿ ಚಿತ್ರಮಂದಿರ ಮಾಡಿಕೊಂಡಿದ್ದಾರೆ.
ತಮ್ಮ ಲ್ಯಾಪ್ಟಾಪ್ ಸುತ್ತಲೂ ಪುಟಾಣಿ ಸಿನಿಮಾ ಹಾಲ್‌ನಂಥ ಸೆಟ್ಟಿಂಗ್ ಮಾಡಿಕೊಂಡಿರುವ ಟಾಮ್, ’2001: ಎ ಸ್ಪೇಸ್ ಒಡಿಸಿ’ ಲ್ಯಾಪ್ಟಾಪ್‌ನಲ್ಲಿ ಬಿತ್ತರಿಸುತ್ತಿರುವ ಫೋಟೋ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾರೆ.
“ಹಿರಿತೆರೆಯ ಅನುಭವವನ್ನು ಮರುಸೃಷ್ಟಿ ಮಾಡಲೆಂದು ನನ್ನ ಲ್ಯಾಪ್ಟಾಪ್‌ನಲ್ಲೇ ’ಸ್ಪೆಷಲ್ ಲಾಕ್‌ಡೌನ್ ಸಿನಿಮಾ’ ಸೃಷ್ಟಿ ಮಾಡಿದ್ದೇನೆ” ಎಂದು ಟ್ವೀಟ್ ಮಾಡಿದ್ದಾರೆ ಟಾಮ್.
https://twitter.com/kingsley_tom/status/1346365034864246784?ref_src=twsrc%5Etfw%7Ctwcamp%5Etweetembed%7Ctwterm%5E1346365034864246784%7Ctwgr%5E%7Ctwcon%5Es1_&ref_url=https%3A%2F%2Fwww.timesnownews.com%2Fthe-buzz%2Farticle%2Flockdown-cinema-man-creates-a-miniature-movie-theatre-creativity-wows-netizens%2F707508