alex Certify ವರ್ಚುವಲ್‌ ಸಂಗೀತ ಪ್ರದರ್ಶನಕ್ಕೂ‌ ತೆರಿಗೆ ವಿಧಿಸಲು ಮುಂದಾದ ಬ್ರಿಟನ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವರ್ಚುವಲ್‌ ಸಂಗೀತ ಪ್ರದರ್ಶನಕ್ಕೂ‌ ತೆರಿಗೆ ವಿಧಿಸಲು ಮುಂದಾದ ಬ್ರಿಟನ್

ಕೊರೊನಾ ವೈರಸ್​ನಿಂದಾಗಿ ಲೈವ್ ಇವೆಂಟ್​ಗಳನ್ನ ಮಿಸ್​ ಮಾಡಿಕೊಳ್ಳುತ್ತಿರುವ ಸಂಗೀತ ಅಭಿಮಾನಿಗಳಿಗೆ ವರ್ಚುವಲ್​ ಸಂಗೀತ ಕಚೇರಿಗಳು ಪ್ರೇಕ್ಷಕರ ಮನ ಗೆಲ್ಲುವಲ್ಲಿ ಮಹತ್ವದ ಪಾತ್ರವಲ್ಲಿ ನಿರ್ವಹಿಸುತ್ತಿವೆ. ಆದರೆ ಬ್ರಿಟನ್​ನಲ್ಲಿ ವರ್ಚುವಲ್​ ಸಂಗೀತ ಪ್ರದರ್ಶನಕ್ಕೆ ತೆರಿಗೆ ವಿಧಿಸುವ ಬಗ್ಗೆ ಯೋಚಿಸಲಾಗುತ್ತಿದ್ದು ಕಲಾವಿದರಿಂದ ವಿರೋಧ ವ್ಯಕ್ತವಾಗಿದೆ .

ಹೊಸ ತೆರಿಗೆ ನಿಯಮದ ಪ್ರಕಾರ 50 ಸಾವಿರ ಪೌಂಡ್​ ಅಥವಾ 49,76,760.05 ರೂಪಾಯಿಗಳವೆರೆಗ ಸಂಪಾದಿಸುವ ವರ್ಚುವಲ್​ ಪ್ರದರ್ಶನಗಳು ತಮ್ಮ ಆದಾಯದ 8 ಪ್ರತಿಶತವನ್ನ ಸಾಮೂಹಿಕವಾಗಿ ಪಾವತಿ ಮಾಡಬೇಕಾಗುತ್ತೆ. ಆದರೆ 4,47,90,840.44 ರೂಪಾಯಿಗಳವರೆಗೆ ಸಂಪಾದಿಸುವವರು ತಮ್ಮ ಆದಾಯದಲ್ಲಿ 17 ಪ್ರತಿಶತವನ್ನ ಹಿಂದಿರುಗಿಸಬೇಕಾಗುತ್ತೆ.

ಆದರೆ ಬ್ರಿಟೀಷ್​ ಸಂಗೀತ ಕ್ಷೇತ್ರದ ಅನೇಕ ಕಲಾವಿದರು ಈ ಪ್ರಾಯೋಗಿಕ ಸುಂಕ ವ್ಯವಸ್ಥೆಯನ್ನ ಟೀಕೆ ಮಾಡಿದ್ದಾರೆ. ಈ ಪ್ರಸ್ತಾವಿತ ವ್ಯವಸ್ಥೆಯು ಲೈವ್​ ಸ್ಟ್ರೀಮಿಂಗ್​​ ಪದ್ಧತಿಯನ್ನ ದುರ್ಬಲಗೊಳಿಸುತ್ತೆ. ಇದರಿಂದ ಸಣ್ಣ ಕಲಾವಿದರಿಗೆ ಸಮಸ್ಯೆ ಉಂಟಾಗುತ್ತೆ ಎಂದು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...