ಅಮೆರಿಕದ 7 ವರ್ಷದ ಬಾಲಕ ತನ್ನ ಪುಟ್ಟ ತಂಗಿಯನ್ನ ಅಗ್ನಿ ಅವಘಡದಿಂದ ಪಾರು ಮಾಡುವ ಮೂಲಕ ಸಾಹಸ ಪ್ರದರ್ಶಿಸಿದ್ದಾನೆ.
ಟೆನ್ನೆಸ್ಸೀಯ ನ್ಯೂ ಟೆಜ್ವೆಲ್ನಲ್ಲಿರುವ ತನ್ನ ಸುಡುತ್ತಿರುವ ಮನೆಯ ಕಿಟಕಿ ಮೂಲಕ ಹತ್ತಿದ ಎಲಿ ಡೇವಿಡ್ಸನ್ ತನ್ನ 22 ತಿಂಗಳ ಸಹೋದರಿಯನ್ನ ರಕ್ಷಿಸುವಲ್ಲಿ ಯಶಸ್ವಿಯಾದನು.
ಮಧ್ಯರಾತ್ರಿ ವೇಳೆ ಮನೆಯಲ್ಲಿ ಹೊಗೆ ತುಂಬಿಕೊಂಡಿದ್ದನ್ನ ಎಚ್ಚರಗೊಂಡ ಎಲಿ ಪೋಷಕರು ಕೂಡಲೇ ಅಗ್ನಿಶಾಮಕ ದಳಕ್ಕೆ ಕರೆ ಮಾಡಿದ್ದಾರೆ.
ಮನೆಯ ಹಾಲ್ನಲ್ಲಿ ಸಿಕ್ಕಾಪಟ್ಟೆ ಹೊಗೆ ತುಂಬಿಕೊಂಡಿದ್ದರಿಂದ ಮಗಳು ಇದ್ದ ಕೋಣೆಯನ್ನ ಪ್ರವೇಶಿಸೋಕೆ ಯಾರಿಂದಲೂ ಸಾಧ್ಯವಾಗಲಿಲ್ಲ. ಕೂಡಲೇ ಬಾಲಕಿಯ ತಂದೆ ತನ್ನ 7 ವರ್ಷದ ಮಗನಿಗೆ ನೀನು ರಕ್ಷಣಾ ಕಾರ್ಯದಲ್ಲಿ ಭಾಗಿಯಾಗಲೇಬೇಕು ಎಂದು ಉತ್ತೇಜನ ನೀಡಿದ್ರು.
ಕೂಡಲೇ ಕಿಟಕಿ ಮೂಲಕ ತಂಗಿಯ ಕೋಣೆಯನ್ನ ಪ್ರವೇಶಿಸಿದ ಎಲಿ ಕೂಡಲೇ ಆಕೆಯನ್ನ ಬಚಾವ್ ಮಾಡುವಲ್ಲಿ ಯಶಸ್ವಿಯಾಗಿದ್ದಾನೆ.