alex Certify ಮಗುವಿನ ಮಂತ್ರ ಶಕ್ತಿಗೆ ಅಲುಗಾಡಿತಾ ಮರ…? ಇಲ್ಲಿದೆ ಇದರ ಹಿಂದಿನ ರಹಸ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಗುವಿನ ಮಂತ್ರ ಶಕ್ತಿಗೆ ಅಲುಗಾಡಿತಾ ಮರ…? ಇಲ್ಲಿದೆ ಇದರ ಹಿಂದಿನ ರಹಸ್ಯ

ಅಲ್ಲಾದ್ದೀನ್ ನ‌ ಮಾಯಾದೀಪದ ಕತೆ ಬಹಳ ವರ್ಷ ಫೇಮಸ್. ಅದೇ ರೀತಿಯ ಸೂಪರ್ ಪವರ್ ಕಥೆಗಳು ಹತ್ತು ಹಲವು. ಇದೀಗ ಬಾಲಕನೊಬ್ಬನ ಮಹಾಶಕ್ತಿಗೆ ಮರವೇ ಚಲನೆಗೊಳ್ಳುವಂತೆ ಭಾಸವಾಗುವ ವಿಡಿಯೋ ತುಣುಕು ವೈರಲ್ ಆಗಿದೆ.

ರೆಡ್ಡಿಟ್ನಲ್ಲಿ ಪೋಸ್ಟ್ ಮಾಡಲಾಗಿರುವ ವಿಡಿಯೋದಲ್ಲಿ ಪುಟ್ಟ ಹುಡುಗ ಸುತ್ತ ಓಡುವುದನ್ನು ಕಾಣಬಹುದು,

ಬಳಿಕ ಇದ್ದಕ್ಕಿದ್ದಂತೆ ಅವನು ಓಡುವುದನ್ನು ನಿಲ್ಲಿಸಿ ಮರದ ಕಡೆಗೆ ತನ್ನ ಕೈಗಳನ್ನು ತೋರಿ ಮ್ಯಾಜಿಕ್ ಮಾಡುವಂತೆ ಬೆರಳಿನ ‌ಚಲನೆ ಮಾಡುತ್ತಾನೆ. ಆಗ ಎಲೆಗಳು ಅಲುಗಾಡಲಾರಂಭಿಸಿದವು.

ಮಗು ಇದನ್ನು ಮಾಡುತ್ತಿದೆ, ಹೇಗೆ ಸಾಧ್ಯ ಎಂದು ಭಾವಿಸಬಹುದು.‌ ಆದರೆ ವಿಡಿಯೋದ ಮುಂದಿನ ನಿಮಿಷದಲ್ಲಿ, ಅದು ಏಕೆ ಸಂಭವಿಸಿತು ಎಂಬುದಕ್ಕೆ ನಿಜವಾದ ಕಾರಣ ನೋಡಬಹುದು. ಮರದ ಕೊಂಬೆಗೆ ಹಾಕಿದ್ದ ಜೋಕಾಲಿಯಲ್ಲಿ ಕುಳಿತಿದ್ದ ಮಗುವಿನ ತಂದೆ, ಎಷ್ಟು ಜೋರಾಗಿ ತೂಗುತ್ತಾರೋ ಕೊಂಬೆ ಅಲುಗಾಡುತ್ತದೆ.‌ ಮರವೇ ಅಲುಗಾಡುತ್ತದೆ. ಮಗು ಮಾತ್ರ ತನ್ನ ಕೈ ಚಳಕದಿಂದಲೇ ಮರದ ಎಲೆಗಳು ಅಲುಗಾಡುತ್ತಿವೆ ಎಂದು ಭಾವಿಸಿರುತ್ತಾನೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...