ನಾಯಿಗಳಂತೆಯೇ ಕಾಂಗರೂಗಳು ಸಹ ಮಾನವರ ಜೊತೆ ಸಂವಹನ ಮಾಡಬಲ್ಲವು ಎಂದು ಸಂಶೋಧಕರು ಅಧ್ಯಯನವೊಂದರಲ್ಲಿ ಬಹಿರಂಗಪಡಿಸಿದ್ದಾರೆ.
ಈ ಅಧ್ಯಯನಕ್ಕೆ ಸೆರೆಮನೆಯಲ್ಲಿದ್ದ 11 ಕಾಂಗರೂಗಳನ್ನ ಬಳಸಿಕೊಳ್ಳಲಾಗಿತ್ತು. ಇವುಗಳಲ್ಲಿ ತಿನ್ನಲು ಪೆಟ್ಟಿಗೆಯೊಂದರಲ್ಲಿ ಆಹಾರವನ್ನ ನೀಡಲಾಗಿತ್ತು. ಇದರಲ್ಲಿ 10 ಕಾಂಗರೂಗಳು ಆಹಾರದ ಪೆಟ್ಟಿಗೆಯನ್ನ ತೆಗೆಯಲು ಸಾಧ್ಯವಾಗದಿದ್ದಾಗ ಸಂಶೋಧಕರ ಮುಖವನ್ನೇ ನೋಡಿವೆ.
9 ಕಾಂಗರೂಗಳು ಮನುಷ್ಯರನ್ನ ಹಾಗೂ ಪಾತ್ರೆಯನ್ನ ನೋಡಿವೆ.ಈ ಮೂಲಕ ಆಹಾರದ ಪೆಟ್ಟಿಗೆ ತೆಗೆದುಕೊಡುವಂತೆ ಸನ್ನೆ ಮಾಡಿವೆ.
ಕಾಡು ಪ್ರಾಣಿಗಳು ಈ ರೀತಿ ಸಂವಹನ ನಡೆಸಬಲ್ಲವು ಎಂಬುದನ್ನ ನಾವು ನಿಜವಾಗಿಯೂ ನಿರೀಕ್ಷಿಸಿರಲಿಲ್ಲ ಎಂದು ಐರಿಶ್ ಸಂಶೋಧಕ ಅಲನ್ ಮ್ಯಾಕ್ ಎಲಿಗಾಟ್ ಹೇಳಿದ್ದಾರೆ.