ಮಿಂಚಿನ ಹೊಡೆತಕ್ಕೆ ಅಮೆರಿಕದ ವಿಸ್ಕಾನ್ಸಿನ್‌ನಲ್ಲಿ ಮರವೊಂದು ಸಿಗಿದುಹೋಗಿದೆ. ಇಲ್ಲಿನ ವೌಶಾರಾ ಕೌಂಟಿಯ ವೌಟೋಮಾಮ ಹೈಸ್ಕೂಲ್‌ನಲ್ಲಿ ಕಿರು ಪರೀಕ್ಷೆಯೊಂದಕ್ಕೆ ಸಜ್ಜಾಗುತ್ತಿದ್ದ ವಿದ್ಯಾರ್ಥಿಗಳು ಈ ದೃಶ್ಯಕ್ಕೆ ಸಾಕ್ಷಿಯಾಗಿದ್ದಾರೆ.
ಭದ್ರತಾ ಕ್ಯಾಮೆರಾಗಳು ರೆಕಾರ್ಡ್ ಮಾಡಿಕೊಂಡ ಈ ವಿಡಿಯೋದಲ್ಲಿ ಮಿಂಚಿನ ಏಟಿಗೆ ಮರವೊಂದು ಹೊತ್ತಿ ಉರಿದು ನೆಲಕ್ಕುರುಳುತ್ತಿರುವುದನ್ನು ನೋಡಬಹುದಾಗಿದೆ.
ಮೊಬೈಲ್ ನಲ್ಲೇ ತಲಾಖ್: ಮಕ್ಕಳು, ಪ್ರಿಯಕರನೊಂದಿಗೆ ಪರಾರಿಯಾದ ಪತ್ನಿ
ಈ ವಿಡಿಯೋವನ್ನು ಪೋಸ್ಟ್ ಮಾಡಿರುವ ಅಮೆರಿಕ ರಾಷ್ಟ್ರೀಯ ಹವಾಮಾನ ಸೇವೆ, “ಮಿಂಚು ಯಾವಾಗ ಬಡಿಯುತ್ತದೆ ಎಂದು ಹೇಳಲು ಬರುವುದಿಲ್ಲ. ವೌಟೋಮಾ ಹೈಸ್ಕೂಲ್‌ನಲ್ಲಿ ಈ ಬೆಳಿಗ್ಗೆ ಮಿಂಚೊಂದು ಪೈನ್ ಮರಕ್ಕೆ ಅಪ್ಪಳಿಸಿದ ವಿಡಿಯೋ ಇಲ್ಲಿದೆ” ಹೀಗಾಗಿ ನಾವು ಹೇಳುವುದೇನೆಂದರೆ, “ಗುಡುಗು ಬಡಿಯುತ್ತಲೇ ಮನೆಗಳ ಒಳಗೆ ಹೋಗಿ. ದಯವಿಟ್ಟು ಮುಂದಿನ ಬಾರಿ ನೀವು ಗುಡುಗಿನ ಶಬ್ದ ಕೇಳುತ್ತಲೇ ನಮ್ಮ ಈ ಸಲಹೆಯನ್ನು ಪಾಲಿಸಿ” ಎಂದು ಹೇಳಲಾಗಿದೆ.
https://www.facebook.com/watch/?v=522099975619840&t=2