ಕೊರೊನಾದಿಂದ ಸಾವಿಗೀಡಾಗಿದ್ದ ಅಭ್ಯರ್ಥಿ ಚುನಾವಣೆಯಲ್ಲಿ ಗೆಲುವು ಸಾಧಿಸಿದ ವಿಚಿತ್ರ ಘಟನೆಯೊಂದು ಅಮೆರಿಕ ಉತ್ತರ ಡಕೋಟಾ ಕ್ಷೇತ್ರದಲ್ಲಿ ನಡೆದಿದೆ. ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಬಿಸ್ಮಾರ್ಕ್ ಡೇವಿಡ್ ಆಂಡಾಲ್ ಕೊರೊನಾ ಸೋಂಕಿನಿಂದ ಅಕ್ಟೋಬರ್ನಲ್ಲಿ ನಿಧನರಾಗಿದ್ದರು.
ಬಿಸ್ಮಾರ್ಕ್ ಜಿಲ್ಲೆಯಲ್ಲಿ ಇಬ್ಬರು ಪ್ರತಿನಿಧಿಗಳನ್ನ ಆಯ್ಕೆ ಮಾಡಲಾಗುತ್ತೆ. ಇದರಲ್ಲಿ ಉತ್ತರ ಡಕೋಟಾ ಕ್ಷೇತ್ರದಿಂದ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯಾಗಿ 55 ವರ್ಷದ ಡೇವಿಡ್ ಕಣಕ್ಕಿಳಿದಿದ್ದರು. ಇವರು ಈ ಕ್ಷೇತ್ರದ ಜನಪ್ರಿಯ ಶಾಸಕರಲ್ಲಿ ಒಬ್ಬರಾದ ರೆಫೆ ಜೆಫ್ ಡೆಲ್ಝರ್ನ್ನ ಸೋಲಿಸಿದ್ದಾರೆ. ಮೃತ ಡೇವಿಡ್ ಶೇಕಡಾ 35ರಷ್ಟು ಮತಗಳನ್ನ ಸಂಪಾದಿಸಿದ್ದಾರೆ.