
ಕೊರೊನಾ ವೈರಸ್ ಮಹಾಮಾರಿಗೆ ವಿಶ್ವದ ದೊಡ್ಡ ದೊಡ್ಡ ರಾಷ್ಟ್ರಗಳೇ ತಲೆಬಾಗಿಸಿವೆ. ಲಸಿಕೆ ಇನ್ನೂ ಪ್ರಯೋಗ ಹಂತದಲ್ಲೇ ಇರೋದ್ರಿಂದ ಎಲ್ಲ ದೇಶಗಳಲ್ಲೂ ಸಾಮಾಜಿಕ ಅಂತರ, ಮಾಸ್ಕ್ಗಳ ಬಳಕೆ ಕಡ್ಡಾಯವಾಗಿ ಹೋಗಿದೆ. ಆದರೆ ನ್ಯೂಜಿಲೆಂಡ್ನಲ್ಲಿ ಮಾತ್ರ ಜನತೆ ಸಾಮಾಜಿಕ ಅಂತರವನ್ನೆಲ್ಲ ಮರೆತು ಸಹಜ ಸ್ಥಿತಿಗೆ ಮರಳಿದಂತೆ ಕಾಣ್ತಿದೆ.
ಭಾನುವಾರ ನ್ಯೂಜಿಲೆಂಡ್ನ ವೆಲ್ಲಿಂಗ್ಟನ್ ಕ್ರೀಡಾಂಗಣದಲ್ಲಿ ರಗ್ಬಿ ಕ್ರೀಡಾ ಆಯೋಜಿಸಲಾಗಿತ್ತು. ಈ ಆಟವನ್ನ ವೀಕ್ಷಿಸೋಕೆ ಕ್ರೀಡಾಂಗಣದಲ್ಲಿ 30 ಸಾವಿರಕ್ಕೂ ಹೆಚ್ಚು ಅಭಿಮಾನಿಗಳು ಜಮಾಯಿಸಿದ್ದಾರೆ. ಸಾಮಾಜಿಕ ಅಂತರವಿಲ್ಲದೇ, ಮಾಸ್ಕ್ ಕೂಡ ಧರಿಸದೇ ಜನರು ಮೈದಾನದಲ್ಲಿರೋ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸೌಂಡ್ ಮಾಡಿದೆ.
ಜೂನ್ ತಿಂಗಳಲ್ಲೇ ನ್ಯೂಜಿಲೆಂಡ್ ಕೊರೊನಾ ಮುಕ್ತ ರಾಷ್ಟ್ರ ಅಂತಾ ಘೋಷಣೆ ಮಾಡಿಕೊಂಡಿತ್ತು. ಇದಾದ ಬಳಿಕ ಕೆಲವೆಡೆ ಕೊರೊನಾ ಸೋಂಕು ಕಾಣಿಸಿಕೊಂಡ ಬಳಿಕ ಆಕ್ಲೆಂಡ್ನಲ್ಲಿ ಕಠಿಣ ಲಾಕ್ಡೌನ್ ಜಾರಿಮಾಡಲಾಗಿತ್ತು. ಇದಾದ ಬಳಿಕ ತುಂಬಾ ಕಡಿಮೆ ಸಂಖ್ಯೆಯಲ್ಲಿ ಸೋಂಕು ಬೆಳಕಿಗೆ ಬಂದಿದೆ.
ಬರೋಬ್ಬರಿ 7 ತಿಂಗಳ ಬಳಿಕ ಮೊದಲ ರಗ್ಬಿ ಪಂದ್ಯ ಆಯೋಜಿಸಲಾಗಿತ್ತು ಅಂತಾ ಪತ್ರಿಕೆಗಳು ವರದಿ ಮಾಡಿವೆ. ಇನ್ನು ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದ್ದಂತೆ ಅನೇಕರು ನ್ಯೂಜಿಲೆಂಡ್ ಸರ್ಕಾರದ ಕಾರ್ಯಕ್ಷಮತೆಯನ್ನ ಕೊಂಡಾಡಿದರೆ ಇನ್ನೂ ಕೆಲವರು ಕೊರೊನಾವನ್ನ ಕಡೆಗಣಿಸಬೇಡಿ ಅಂತಾ ಟೀಕಿಸಿದ್ದಾರೆ.