ಅತ್ಯಂತ ದೊಡ್ಡ ಕ್ಷುದ್ರಗ್ರಹ ಮಾರ್ಚ್ 21ರಂದು ಭೂಮಿಯಿಂದ ಅತ್ಯಂತ ಸನಿಹದಲ್ಲಿ ಅಂದರೆ 2 ಮಿಲಿಯನ್ ಕಿಲೋಮೀಟರ್ ದೂರದಿಂದ ಹಾದುಹೋಗಲಿದೆ ಎಂದು ನಾಸಾ ಮಾಹಿತಿ ನೀಡಿದೆ.
2001 ಎಫ್ಓ32 ಎಂಬ ಹೆಸರಿನ ಈ ಆಸ್ಟೆರಾಯ್ಡ್ನ್ನು 20 ವರ್ಷಗಳ ಹಿಂದೆಯೇ ಕಂಡು ಹಿಡಿಯಲಾಗಿದೆ ಎಂದು ನಾಸಾ ಹೇಳಿದೆ. ಈ ಕ್ಷುದ್ರಗ್ರಹ 3000 ಅಡಿ ವ್ಯಾಸ ಹೊಂದಿದೆ.
ಸೂರ್ಯನ ಸುತ್ತ 2001ಎಫ್ಒ 32ರ ಕಕ್ಷೆಯ ಹಾದಿಯನ್ನ ನಾವು ನಿಖರವಾಗಿ ತಿಳಿದಿದ್ದೇವೆ ಎಂದು ಸೆಂಟರ್ ಫಾರ್ ನಿಯರ್ ಅರ್ಥ್ ಸ್ಟಡೀಸ್ ನಿರ್ದೇಶಕ ಪಾಲ್ ಚೋಡಾಸ್ ಮಾಹಿತಿ ನೀಡಿದ್ದಾರೆ.
ವಿಲೀನಗೊಂಡ ಬ್ಯಾಂಕುಗಳ ಗ್ರಾಹಕರಿಗೆ ಇಲ್ಲಿದೆ ಒಂದು ಮಹತ್ವದ ಸುದ್ದಿ
ಉಳಿದೆಲ್ಲ ಕ್ಷುದ್ರಗ್ರಹಗಳು ಭೂಮಿಯನ್ನ ಎದುರಿಸುವ ವೇಗಕ್ಕಿಂತ 2001ಎಫ್ಓ 32 ಗಂಟೆಗೆ ಸುಮಾರು 77 ಸಾವಿರ ಮೈಲಿ ವೇಗದಲ್ಲಿ ಹಾದು ಹೋಗಲಿದೆ ಎಂದು ನಾಸಾ ಹೇಳಿದೆ.
ಪ್ರಸ್ತುತ ಈ ವಸ್ತುವಿನ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಬಂದಿಲ್ಲ. ಹೀಗಾಗಿ ಈ ಕ್ಷುದ್ರಗ್ರಹದ ಬಗ್ಗೆ ಹೆಚ್ಚಿನ ಅಧ್ಯಯನ ಮಾಡಲು ನಮಗಿದು ಸೂಕ್ತ ಅವಕಾಶವಾಗಿದೆ ಎಂದು ನಾಸಾ ಜೆಟ್ ಪ್ರೊಲಲ್ಷನ್ ಪ್ರಯೋಗಾಲಯದ ಪ್ರಧಾನ ವಿಜ್ಞಾನಿ ಹೇಳಿದ್ದಾರೆ.