alex Certify ಪ್ರೇಕ್ಷಕರ ಬದಲು ಕ್ರೀಡಾಂಗಣದ ತುಂಬೆಲ್ಲಾ ಸೆಕ್ಸ್‌ ಡಾಲ್…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರೇಕ್ಷಕರ ಬದಲು ಕ್ರೀಡಾಂಗಣದ ತುಂಬೆಲ್ಲಾ ಸೆಕ್ಸ್‌ ಡಾಲ್…!

ಕೊರೋನಾ‌ ಬಿಕ್ಕಟ್ಟಿನ ನಡುವೆ‌ ಜನಜೀವನ ನಿಧಾನವಾಗಿ ಸಾಮಾನ್ಯ ಸ್ಥಿತಿಗೆ ಬರುತ್ತಿದೆ. ಸ್ಥಬ್ಧಗೊಂಡಿದ್ದ ವಿವಿಧ ಕ್ಷೇತ್ರ ಮತ್ತೆ ಷರತ್ತು ಬದ್ಧವಾಗಿ ಪುನರಾರಂಭವಾಗುತ್ತಿದೆ.

ಕ್ರೀಡಾ ಚಟುವಟಿಕೆ, ತರಬೇತಿಗಳು ಆರಂಭವಾಗಿದೆ. ಪ್ರೇಕ್ಷಕರಿಲ್ಲದ ಕ್ರೀಡಾಂಗಣದಲ್ಲಿ ಕ್ರೀಡಾಪಟುಗಳು ಕಸರತ್ತು ಆರಂಭಿಸುತ್ತಿದ್ದಾರೆ.

ಈ ವೇಳೆ ಕೊರಿಯಾದ ಒಂದು ಫುಟ್‌ಬಾಲ್ ಕ್ಲಬ್ ಸ್ಟೇಡಿಯಂನಲ್ಲಿ ಮನುಷ್ಯಾಕೃತಿ ಗೊಂಬೆಗಳನ್ನು ಸ್ಟ್ಯಾಂಡ್‌ನಲ್ಲಿ ಇರಿಸುವ ಮೂಲಕ ಖಾಲಿತನ ತುಂಬುವ ಪ್ರಯತ್ನ ಮಾಡಲಾಗಿತ್ತು.

ಆಟಗಾರರು ರಂಜಿಸುವ ಈ ಆಲೋಚನೆಯು ಒಳ್ಳೆಯದಕ್ಕಿಂತ ಹೆಚ್ಚಿನ ನಷ್ಟ ಮಾಡಿದೆ. ‘ಸೆಕ್ಸ್ ಗೊಂಬೆಗಳೊಂದಿಗೆ ಸ್ಟ್ಯಾಂಡ್‌ಗಳನ್ನು ಭರ್ತಿ ಮಾಡಿದ್ದಕ್ಕಾಗಿ ಫುಟ್‌ಬಾಲ್ ತಂಡ ಕ್ಷಮೆ ಯಾಚಿಸುವಂತಾಯಿತು.

ಕೆ- ಲೀಗ್ ನಲ್ಲಿ ‘ಸೆಕ್ಸ್ ಡಾಲ್’ ಮನುಷ್ಯಾಕೃತಿಗಳನ್ನು ಕ್ರೀಡಾಂಗಣದಾದ್ಯಂತ ಆಸನಗಳಲ್ಲಿ ಇರಿಸಲಾಗಿತ್ತಲ್ಲದೇ ಕ್ಲಬ್ ಟೀ ಶರ್ಟ್‌ಗಳನ್ನು ಅವುಗಳಿಗೆ ತೊಡಿಸಲಾಗಿತ್ತು. ಅಲ್ಲಿನ ಫೋಟೊ ಜಾಲತಾಣದಲ್ಲಿ ವೈರಲ್ ಆದ ಬೆನ್ನಲ್ಲೇ ವಿವಾದ ಭುಗಿಲೆದ್ದಿತು. ಘಟನೆ ನಂತರ, ಕ್ಲಬ್ ಕ್ಷಮೆಯಾಚಿಸಿ ವಿಷಾದಿಸಿತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...