ಕರೊನಾ ವೈರಸ್ ದೇಶಕ್ಕೆ ಬಂದು ಅಪ್ಪಳಿಸಿ ಏಳೆಂಟು ತಿಂಗಳು ಕಳೆದ್ರೂ ಸಹ ಅದು ಕಡಿಮೆಯಾಗೋ ಲಕ್ಷಣವೇನು ಕಾಣ್ತಿಲ್ಲ. ಹೀಗಾಗಿ ಜನರು ಫೇಸ್ ಮಾಸ್ಕ್, ಸಾಮಾಜಿಕ ಅಂತರವನ್ನ ಕಾಪಾಡಿಕೊಂಡು ಬದುಕಬೇಕಾದ ಅನಿವಾರ್ಯತೆ ಬಂದೊದಗಿದೆ.
ಆದರೆ ಹೋಟೆಲ್ಗಳಿಗೆ ಹೋದಾಗ ತಿನ್ನೋ ಸಂದರ್ಭದಲ್ಲಿ ಮಾಸ್ಕ್ ತೆಗೆಯೋದು ಅನಿವಾರ್ಯ. ಇದಕ್ಕೊಂದು ಪರಿಹಾರ ಹುಡುಕಿರೋ ಕಲ್ಕತ್ತಾದ ಹೋಟೆಲ್, ಗ್ರಾಹಕರಿಗೆ ಝಿಪ್ ಮಾಸ್ಕ್ ನೀಡಿದೆ. ಇದನ್ನ ಧರಿಸಿದ್ರೆ ಮುಖದಿಂದ ಮಾಸ್ಕ್ ತೆಗೆಯೋ ಅವಶ್ಯಕತೆಯೇ ಇರೋದಿಲ್ಲ. ಉಚಿತವಾಗಿಯೇ ಗ್ರಾಹಕರಿಗೆ ಈ ಮಾಸ್ಕ್ನ್ನ ನೀಡಲಾಗ್ತಾ ಇದ್ದು, ಇಷ್ಟವಿದ್ದವರು ಮಾತ್ರ ಈ ಮಾಸ್ಕ್ನ್ನ ಧರಿಸಬಹುದಾಗಿದೆ.
ಇನ್ನು ಈ ವಿಚಾರವಾಗಿ ಮಾತನಾಡಿದ ಹೋಟೆಲ್ ಮಾಲೀಕ ಸೋಮೋಶ್ರೀ ಸೇಂಗುಪ್ತಾ, ಕೋವಿಡ್ ಪರಿಸ್ಥಿತಿಯಲ್ಲಿ ಮಾಸ್ಕ್, ಜನತೆಗೆ ಅನಿವಾರ್ಯ ಸಾಧನವಾಗಿದೆ. ಇಂತಹ ಕಠಿಣ ಸ್ಥಿತಿಯಲ್ಲೂ ನಮ್ಮ ಕಷ್ಟ ಅರಿತ ಸರ್ಕಾರ ಹೋಟೆಲ್ಗಳನ್ನ ಓಪನ್ ಮಾಡಲು ಅನುಮತಿ ನೀಡಿದೆ. ಹೀಗಾಗಿ ಗ್ರಾಹಕರ ಆರೋಗ್ಯವನ್ನ ಕಾಪಾಡುವ ಸಲುವಾಗಿ ನಾವು ಈ ಪ್ಲಾನ್ ಮಾಡಿದ್ದೇವೆ ಅಂತಾ ಹೇಳಿದ್ರು.