alex Certify ಆಹಾರ ಪ್ರಿಯರ ಸೇಫ್ಟಿಗಾಗಿ ಝಿಪ್​ ಮಾಸ್ಕ್​…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಹಾರ ಪ್ರಿಯರ ಸೇಫ್ಟಿಗಾಗಿ ಝಿಪ್​ ಮಾಸ್ಕ್​…!

Kolkata Restaurant Offers Zipped-Facemasks to Prevent Removal of Covers while Eating

ಕರೊನಾ ವೈರಸ್​ ದೇಶಕ್ಕೆ ಬಂದು ಅಪ್ಪಳಿಸಿ ಏಳೆಂಟು ತಿಂಗಳು ಕಳೆದ್ರೂ ಸಹ ಅದು ಕಡಿಮೆಯಾಗೋ ಲಕ್ಷಣವೇನು ಕಾಣ್ತಿಲ್ಲ. ಹೀಗಾಗಿ ಜನರು ಫೇಸ್​ ಮಾಸ್ಕ್​, ಸಾಮಾಜಿಕ ಅಂತರವನ್ನ ಕಾಪಾಡಿಕೊಂಡು ಬದುಕಬೇಕಾದ ಅನಿವಾರ್ಯತೆ ಬಂದೊದಗಿದೆ.

ಆದರೆ ಹೋಟೆಲ್​ಗಳಿಗೆ ಹೋದಾಗ ತಿನ್ನೋ ಸಂದರ್ಭದಲ್ಲಿ ಮಾಸ್ಕ್​​ ತೆಗೆಯೋದು ಅನಿವಾರ್ಯ. ಇದಕ್ಕೊಂದು ಪರಿಹಾರ ಹುಡುಕಿರೋ ಕಲ್ಕತ್ತಾದ ಹೋಟೆಲ್,​ ಗ್ರಾಹಕರಿಗೆ ಝಿಪ್​ ಮಾಸ್ಕ್​ ನೀಡಿದೆ. ಇದನ್ನ ಧರಿಸಿದ್ರೆ ಮುಖದಿಂದ ಮಾಸ್ಕ್​ ತೆಗೆಯೋ ಅವಶ್ಯಕತೆಯೇ ಇರೋದಿಲ್ಲ. ಉಚಿತವಾಗಿಯೇ ಗ್ರಾಹಕರಿಗೆ ಈ ಮಾಸ್ಕ್​ನ್ನ ನೀಡಲಾಗ್ತಾ ಇದ್ದು, ಇಷ್ಟವಿದ್ದವರು ಮಾತ್ರ ಈ ಮಾಸ್ಕ್​ನ್ನ ಧರಿಸಬಹುದಾಗಿದೆ.

ಇನ್ನು ಈ ವಿಚಾರವಾಗಿ ಮಾತನಾಡಿದ ಹೋಟೆಲ್​ ಮಾಲೀಕ ಸೋಮೋಶ್ರೀ ಸೇಂಗುಪ್ತಾ, ಕೋವಿಡ್​ ಪರಿಸ್ಥಿತಿಯಲ್ಲಿ ಮಾಸ್ಕ್,​ ಜನತೆಗೆ ಅನಿವಾರ್ಯ ಸಾಧನವಾಗಿದೆ. ಇಂತಹ ಕಠಿಣ ಸ್ಥಿತಿಯಲ್ಲೂ ನಮ್ಮ ಕಷ್ಟ ಅರಿತ ಸರ್ಕಾರ ಹೋಟೆಲ್​ಗಳನ್ನ ಓಪನ್​ ಮಾಡಲು ಅನುಮತಿ ನೀಡಿದೆ. ಹೀಗಾಗಿ ಗ್ರಾಹಕರ ಆರೋಗ್ಯವನ್ನ ಕಾಪಾಡುವ ಸಲುವಾಗಿ ನಾವು ಈ ಪ್ಲಾನ್​ ಮಾಡಿದ್ದೇವೆ ಅಂತಾ ಹೇಳಿದ್ರು.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...