alex Certify ಬೆರಗಾಗಿಸುತ್ತೆ ಚಿಪ್ಸ್‌ ಮೇಲಿನ ಈ ಬೆಕ್ಕಿನ ಪ್ರೀತಿ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆರಗಾಗಿಸುತ್ತೆ ಚಿಪ್ಸ್‌ ಮೇಲಿನ ಈ ಬೆಕ್ಕಿನ ಪ್ರೀತಿ….!

ಬೆಕ್ಕುಗಳು ಮುದ್ದಿನ ಸಾಕುಪ್ರಾಣಿಗಳು. ಅವು ಸದಾ ನಮ್ಮನ್ನು ಸೆಳೆಯುವುದೇ ಹೆಚ್ಚು. ಅವು ಏನು ಮಾಡಿದರೂ ಮುದ್ಮುದ್ದಾಗೇ ಕಾಣುತ್ತವೆ.

ಈ ಬೆಕ್ಕು ಚೀಟೋಸ್ ಮುಟ್ಟಲು ಬಿಡದೆ ಸತಾಯಿಸುತ್ತದೆ. ಚೀಟೋಸ್ ಅಂದರೆ ಇದಕ್ಕೆ ಅಷ್ಟು ಇಷ್ಟ ಇರಬೇಕೇನೋ ಅನಿಸುವಷ್ಟು ಪ್ರೀತಿಯಿಂದ ಚಿಪ್ಸ್ ಪೊಟ್ಟಣವನ್ನು ತಬ್ಬಿ ಹಿಡಿಯುತ್ತಿದೆ.

ಮುದ್ದಿನ ಬೆಕ್ಕಿನ ಈ ವಿಡಿಯೋ ಇನ್ ಸ್ಟಾಗ್ರಾಮ್ ನಲ್ಲಿ ವೈರಲ್ ಆಗಿದ್ದು, ನನ್ನ ಚೀಟೋಸ್ ನಿಂದ ದೂರ ಇರಿ. ಇದು ನನ್ನದು ಎಂದು ಬೆಕ್ಕು ಹೇಳುತ್ತಿರುವಂತೆ ಅಡಿ ಬರಹವನ್ನೂ ಕೊಡಲಾಗಿದೆ.

ಕಿಟ್ಟಿ ಹೆಸರಿನ ಬೆಕ್ಕು ಚೀಟೋಸ್ ಪೊಟ್ಟಣವನ್ನು ತಬ್ಬಿಹಿಡಿದು ಹಾಸಿಗೆ ಮೇಲೆ ಮಗ್ಗಲು ಮಲಗಿದೆ. ಅದರ ಮಾಲೀಕರು ಬೇಕೆಂದೇ ಚೀಟೋಸ್ ಪೊಟ್ಟಣವನ್ನು ಕಸಿಯುವ ನಾಟಕ ಮಾಡುತ್ತಾರೆ. ಆದರೆ, ಕಿಟ್ಟಿ ಮಾತ್ರ ಅದನ್ನು ಮುಟ್ಟಲು ಬಿಡುವುದಿಲ್ಲ. ಎರಡು ಮೂರು ಬಾರಿ ಹೀಗೆ ಮಾಡಿದಾಗ ಪೊಟ್ಟಣವನ್ನ ತನ್ನದೆನ್ನುವಂತೆ ಇನ್ನಷ್ಟು ಹತ್ತಿರಕ್ಕೆ ಬಾಚಿ ತಬ್ಬುವ ಮುದ್ದಾದ ವಿಡಿಯೋಗೆ ಸಾಕಷ್ಟು ಮೆಚ್ಚುಗೆಯೂ ವ್ಯಕ್ತವಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...