alex Certify ಬಾಲಕಿಯೇ ಶಿಕ್ಷಕಿ, ವಿದ್ಯಾರ್ಥಿಗಳಾದ ಬೆಕ್ಕುಗಳು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಾಲಕಿಯೇ ಶಿಕ್ಷಕಿ, ವಿದ್ಯಾರ್ಥಿಗಳಾದ ಬೆಕ್ಕುಗಳು

ಮಕ್ಕಳಿಗೆ ಶಿಕ್ಷಕರನ್ನು ಅನುಕರಿಸುವುದು, ಅವರ ರೀತಿಯೇ ಪಾಠ ಮಾಡುವುದು ಬಲು ಇಷ್ಟ. ಹಲವು ಮಕ್ಕಳು ಅವರ ಸ್ನೇಹಿತರನ್ನೇ ವಿದ್ಯಾರ್ಥಿಗಳಂತೆ ಕೂರಿಸಿಕೊಂಡು ಶಿಕ್ಷಕರಂತೆ ಪಾಠ ಮಾಡುವ ಆಟ ಆಡುವುದನ್ನು ನೋಡಿದ್ದೇವೆ.

ಪುಟ್ಟ ಬಾಲಕಿಯೊಬ್ಬಳು ಆಕೆಯ ಶಿಕ್ಷಕಿಯನ್ನು ಅನುಕರಿಸುವ ವಿಡಿಯೋವೊಂದು ಸಖತ್ ವೈರಲ್ ಆಗಿದೆ. ವಿಶೇಷ ಎಂದರೆ, ಎದುರು ಕುಳಿತು ಪಾಠ ಕೇಳುತ್ತಿರುವವರು ಮಕ್ಕಳಲ್ಲ; ಎರಡು ಬೆಕ್ಕುಗಳು.

ಬೆಕ್ಕುಗಳು ಟೇಬಲ್ ಮೇಲೆ ತಮ್ಮ ಮುಂದಿನ ಎರಡು ಕಾಲುಗಳನ್ನಿಟ್ಟು, ಪುಸ್ತಕ, ಪೆನ್ಸಿಲ್ ಗಳನ್ನಿಟ್ಟುಕೊಂಡು , ಸಮಾಧಾನದಿಂದ ಬಾಲಕಿಯ ಪಾಠ ಕೇಳುವುದನ್ನು ನೋಡಿ ಅಚ್ಚರಿಯಾಗುತ್ತದೆ.

ವೆಲ್ ಕಮ್ ನೇಚರ್ ಎಂಬ ಟ್ವಿಟ್ಟರ್ ಖಾತೆಯಲ್ಲಿ “ಕ್ಯಾಟ್ ಕ್ಲಾಸ್ ” ಎಂಬ ಕ್ಯಾಪ್ಶನ್ ನೊಂದಿಗೆ ವಿಡಿಯೋ ಅಪ್ ಲೋಡ್ ಆಗಿದ್ದು, ವೈರಲ್ ಆಗಲು ಹೆಚ್ಚು ಹೊತ್ತು ಬೇಕಾಗಿಲ್ಲ.

29 ಸಾವಿರ ಜನರು ವಿಡಿಯೋ ವೀಕ್ಷಿಸಿದ್ದು, 3 ಸಾವಿರಕ್ಕೂ ಅಧಿಕ ಜನ ಲೈಕ್ ಮಾಡಿದ್ದಾರೆ. “ಆಕೆ ಕ್ಲಾಸ್ ರೂಂನ್ನು ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾಳೆ” ಎಂದು ಒಬ್ಬ, “ನನಗೆ ಇದರ ವಿಷಯವೇನು ಎಂದು ಅರ್ಥವಾಗುತ್ತಿಲ್ಲ. ಸದಾ ಕ್ರಿಯಾಶೀಲವಾಗಿರುವ ಬೆಕ್ಕುಗಳು ಕುಳಿತು ಕೇಳುತ್ತಿವೆ ಎಂಬುದೇ ಅಚ್ಚರಿ” ಎಂದು ಇನ್ನೊಬ್ಬ ಪ್ರತಿಕ್ರಿಯಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...