alex Certify ಆನ್​ಲೈನ್​​ ಕ್ಲಾಸ್​​ನಲ್ಲಿ ಪಾಠವಾಯ್ತು ಇದೀಗ ಪ್ರವಾಸವನ್ನೂ ಮಾಡ್ತಿದ್ದಾರೆ ಶಾಲಾ ಮಕ್ಕಳು..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆನ್​ಲೈನ್​​ ಕ್ಲಾಸ್​​ನಲ್ಲಿ ಪಾಠವಾಯ್ತು ಇದೀಗ ಪ್ರವಾಸವನ್ನೂ ಮಾಡ್ತಿದ್ದಾರೆ ಶಾಲಾ ಮಕ್ಕಳು..!

ಕೊರೊನಾ ವೈರಸ್​ ಸಂಕಷ್ಟದಿಂದ ವಿಶ್ವದ ಬಹುತೇಕ ಕಡೆ ಮಕ್ಕಳು ಆನ್​ಲೈನ್​ ಕ್ಲಾಸ್​ನಲ್ಲೇ ಪಾಠ ಕೇಳುವಂತಾಗಿದೆ. ಆದ್ದರಿಂದ ಇದಕ್ಕಿಂತ ಇನ್ನೂ ಒಂದು ಹೆಜ್ಜೆ ಮುಂದೆ ಹೋದ ಶಿಕ್ಷಕನೊಬ್ಬ ತನ್ನ ವಿದ್ಯಾರ್ಥಿಗಳಿಗೆ ಆನ್​ಲೈನ್​ ಕ್ಲಾಸ್​ ಮೂಲಕವೇ ಪ್ರವಾಸವನ್ನೂ ಮಾಡಿಸಿದ್ದಾರೆ.

ವಾಷಿಂಗ್ಟನ್​ನ ಶಾಲೆಯೊಂದರಲ್ಲಿ ಶಿಕ್ಷಕನಾಗಿರುವ ಗ್ಯಾರೆಟ್​ ಟಾಲ್ಕೋಟ್​ ಎಂಬವರು 30 ನಿಮಿಷಗಳ ಕಾಲ ಮೃಗಾಲಯದಲ್ಲಿ ಆನ್​ಲೈನ್​ ಕ್ಲಾಸ್​ ಮಾಡುವ ಮೂಲಕ ಕಿಂಡರ್​ಗಾರ್ಟನ್​​ ಮಕ್ಕಳಿಗೆ ಮನೆಯಲ್ಲೇ ಕೂತು ಕಾಡು ಪ್ರಾಣಿಗಳನ್ನ ನೋಡುವಂತೆ ಮಾಡಿದ್ದಾರೆ.

ವುಡ್​ಲ್ಯಾಂಡ್​ ಪಾರ್ಕ್​ ಮೃಗಾಲಯಕ್ಕೆ ಬಂದ ಶಿಕ್ಷಕ ತನ್ನ 8 ವಿದ್ಯಾರ್ಥಿಗಳಿಗೆ ವಿಡಿಯೋ ಕಾಲ್​ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗಿದೆ. ಶಿಕ್ಷಕ ಮಕ್ಕಳಿಗೆ ಒಂದೊಂದೇ ಪ್ರಾಣಿಯನ್ನ ತೋರಿಸುತ್ತಾ ಹೋಗಿದ್ದು ಮಕ್ಕಳು ಕೂಡ ಶಿಕ್ಷಕನ ಈ ಟ್ರಿಪ್​ ಪ್ಲಾನ್​ನ್ನು ಎಂಜಾಯ್​ ಮಾಡಿದ್ದಾರೆ.

https://www.instagram.com/p/CMu5Ed0hyqf/?utm_source=ig_web_copy_link

 

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...