ಈ ಲಾಕ್ ಡೌನ್ ಅವಧಿ ಮುಗಿದು ಯಾವಾಗ ನಮ್ಮ ಗೆಳೆಯರನ್ನು, ಹಿತೈಷಿಗಳನ್ನು ಮುಖತಃ ನೋಡಿ ಮಾತನಾಡಿಸುತ್ತೇವೋ ಎಂಬ ಕಾತರ ಎಲ್ಲರಿಗೂ ಇದೆ. ಮಕ್ಕಳಿಗಂತೂ ಬಹಳವೇ ಇದೆ.
ಇಂಥದ್ದೇ ಒಂದು ಘಟನೆಯಲ್ಲಿ 9 ವರ್ಷದ ಇಬ್ಬರು ಮಕ್ಕಳು ಮೂರು ತಿಂಗಳ ಅವಧಿ ಬಳಿಕ ಮತ್ತೆ ಸಿಕ್ಕಾಗ ಪರಸ್ಪರ ಆಲಂಗಿಸಿಕೊಳ್ಳುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಭಿನ್ನ ಮೈಬಣ್ಣಗಳ ಈ ಮಕ್ಕಳ ನಡುವೆ ಅದೆಂಥಾ ಅನ್ಯೋನ್ಯತೆ ಇದೆ ಎಂದರೆ, ಮನುಕುಲಕ್ಕೆ ಜನಾಂಗೀಯ ವೈಷಮ್ಯದಿಂದ ಹೊರಬಂದು ಮಾನವೀಯತೆಯ ಮೌಲ್ಯಗಳನ್ನು ಅರಿತು ಬಾಳಲು ಇದೊಂದು ಪಾಠ ಎಂಬಂತೆ ಇದೆ.
https://twitter.com/GoodNewsCorres1/status/1270958424340287493?ref_src=twsrc%5Etfw%7Ctwcamp%5Etweetembed%7Ctwterm%5E1270958424340287493&ref_url=https%3A%2F%2Fwww.timesnownews.com%2Fthe-buzz%2Farticle%2Fkindergarten-besties-reunite-after-3-months-netizens-have-tears-of-joy-watch%2F606146