alex Certify ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಕುರಿತಾಗಿ ಹರಿದಾಡ್ತಿದೆ ಈ ಕುತೂಹಲಕಾರಿ ಸುದ್ದಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಕುರಿತಾಗಿ ಹರಿದಾಡ್ತಿದೆ ಈ ಕುತೂಹಲಕಾರಿ ಸುದ್ದಿ

ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಜೀವಂತವಾಗಿದ್ದಾನೆಯೇ? ಅಥವಾ ಆತ ಬದುಕಿರುವಂತೆ ಬಿಂಬಿಸಲಾಗುತ್ತಿದೆಯೇ? ಎಂಬ ಚರ್ಚೆ ಹೆಚ್ಚಾಗತೊಡಗಿದೆ.

ಇತ್ತೀಚಿನ ದಿನಗಳಲ್ಲಿ ಜಗತ್ತಿನಾದ್ಯಂತ ಕೇವಲ ಎರಡು ವಿಚಾರಗಳ ಬಗ್ಗೆ ಹೆಚ್ಚಿನ ಚರ್ಚೆಯಾಗುತ್ತಿದೆ. ಅವುಗಳಲ್ಲಿ ಒಂದು ಕೋರೋನಾ ವೈರಸ್, ಮತ್ತೊಂದು ಉತ್ತರ ಕೊರಿಯಾದ ನಾಯಕ ಕಿಮ್ ಜಾಂಗ್ ಉನ್.

ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಅನಾರೋಗ್ಯದಿಂದ ಮೃತಪಟ್ಟಿರುವುದಾಗಿ ವರದಿಯಾಗಿತ್ತು. ಆದರೆ ಅಧಿಕೃತವಾಗಿ ಯಾವುದೇ ಮಾಹಿತಿ ಹೊರಬಂದಿಲ್ಲ. ಕಿಮ್ ಜೀವಂತವಾಗಿದ್ದಾರೆ ಇಲ್ಲವೇ ಎನ್ನುವುದನ್ನು ಖಚಿತಪಡಿಸಿಕೊಳ್ಳಲು ಪ್ರಯತ್ನಗಳು ನಡೆದಿವೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ ಕಿಮ್ ಬಗ್ಗೆ ಆಸಕ್ತಿ ಹೊಂದಿದ್ದಾರೆ. ರಸಗೊಬ್ಬರ ಕಾರ್ಖಾನೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಕಿಮ್ ಭಾಗವಹಿಸಿದ್ದರು ಎನ್ನಲಾದ ಫೋಟೋ ಭಿತ್ತರಿಸಲಾಗಿತ್ತು. ಈ ಮೂಲಕ 20 ದಿನಗಳ ನಂತರ ಕಿಮ್ ಜಾಂಗ್-ಉನ್ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ ಎಂದು ತೋರ್ಪಪಡಿಸಲಾಗಿತ್ತು. ಆದರೆ ಅವರ ಜೀವಂತಿಕೆ ಕುರಿತಾಗಿ ಅನುಮಾನ ವ್ಯಕ್ತವಾಗುತ್ತಲೇ ಇದೆ.

ಜಾಲತಾಣಗಳಲ್ಲಿ ನಿಜವಾಗಿಯೂ ಅವರ ದೇಹ ಡಬಲ್ ಆಗಿದೆಯೇ ಎಂಬ ಚರ್ಚೆ ಜೋರಾಗಿ ನಡೆದಿದೆ. ನೆಟಿಜನ್ ಗಳ ಆಸಕ್ತಿಯನ್ನು ಕೆರಳಿಸಿರುವ ಫೋಟೋ ವೈರಲ್ ಆಗುತ್ತಿದೆ. ಕಿಮ್ ಜಾಂಗ್-ಉನ್ ಮೊದಲಿಗಿಂತಲೂ ಹೆಚ್ಚು ದಪ್ಪಗಾಗಿ ಕಾಣಿಸಿಕೊಂಡಿದ್ದಾರೆ. ಅವರ ಮುಖಚಹರೆ ಬದಲಾಗಿದೆ ಎಂದೆಲ್ಲ ಚರ್ಚೆಯಾಗುತ್ತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...