ಯೋಧರೊಬ್ಬರು ತಮ್ಮ ಮಗಳಿಗೆ ತಮ್ಮನ್ನೇ ಗಿಫ್ಟ್ ಆಗಿ ಪ್ರೆಸೆಂಟ್ ಮಾಡಿಕೊಂಡ ವಿಡಿಯೋವೊಂದು ವೈರಲ್ ಆಗಿದೆ.
ಅಮೆರಿಕ ವಾಯುಪಡೆಯಲ್ಲಿ ಸೇವೆ ಸಲ್ಲಿಸುವ ಟಿಮಾಟಿ ವ್ಹೈಟ್ ತಮ್ಮ ಸೇವೆಯಿಂದ ರಜೆ ಪಡೆದುಕೊಂಡು ಮನೆಗೆ ಮರಳಿದ್ದಾರೆ. ಈ ವೇಳೆ ತಮ್ಮ ಮಗಳು ಹಾರ್ಪರ್ಗೆ ಸರ್ಪ್ರೈಸ್ ಕೊಡಬೇಕೆಂದು ಗಿಫ್ಟ್ ಬಾಕ್ಸ್ ಒಳಗೆ ಸೇರಿಕೊಂಡಿದ್ದಾರೆ ಟಿಮಾಟಿ.
ಮಗಳನ್ನು ಈ ಗಿಫ್ಟ್ ಡಬ್ಬದ ಬಳಿ ಕರೆದುಕೊಂಡು ಬಂದ ಆಕೆಯ ತಾಯಿ, ದೊಡ್ಡ ಪ್ರೆಸೆಂಟ್ಅನ್ನು ತೆರೆದು ನೋಡಲು ಆಕೆಗೆ ತಿಳಿಸಿದ್ದಾರೆ.
ಗಿಫ್ಟ್ ಪೇಪರ್ ಅನ್ನು ಹರಿಯುತ್ತಿದ್ದಂತೆ ಅದರೊಳಗಿದ್ದ ಅಪ್ಪನನ್ನು ಕಂಡು ಭಾರೀ ಖುಷಿಯಾಗಿದ್ದಾಳೆ ಹಾರ್ಪರ್.
ಅಪ್ಪ-ಮಗಳು ಒಬ್ಬರನ್ನೊಬ್ಬರು ಅಪ್ಪಿಕೊಂಡು ಮುದ್ದಾಡುತ್ತಿರುವುದನ್ನು ಸಹ ವಿಡಿಯೋದಲ್ಲಿ ಸೆರೆ ಹಿಡಿಯಲಾಗಿದೆ. ಕಳೆದ ವರ್ಷದ ವಿಡಿಯೋ ಈಗ ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.