ಕೊರೊನಾ ವೈರಸ್ ನಾಶ ಮಾಡಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಈಗಾಗಲೇ ಸಾಕಷ್ಟು ಅಧ್ಯಯನಗಳು ನಡೆಯುತ್ತಿವೆ. ಇದೀಗ ಮನೆಯಲ್ಲಿ ಕಿಟಕಿಗಳನ್ನ ತೆರೆದಿಡೋದ್ರಿಂದ ಕೊರೊನಾ ವೈರಸ್ ಹರಡೋದನ್ನ ಕಡಿಮೆ ಮಾಡಬಹುದು ಎಂದು ತಜ್ಞರ ತಂಡವೊಂದು ಅಭಿಪ್ರಾಯಪಟ್ಟಿದೆ.
ಗಾಳಿಯಾಡದ ಹಾಗೂ ಇಕ್ಕಟ್ಟಿರುವ ಸ್ಥಳಗಳಲ್ಲಿ ಕೊರೊನಾ ವೈರಸ್ ಹರಡುವ ಸಾಧ್ಯತೆ ತುಂಬಾನೇ ಹೆಚ್ಚು ಎಂದು ಶ್ವಾಸಕೋಶದ ತಜ್ಞ ಬಿಎಂಜೆ ವೈದ್ಯಕೀಯ ಜರ್ನಲ್ನಲ್ಲಿ ಪ್ರಕಟಿಸಿದ್ದಾರೆ.
ಗಾಳಿಯಾಡದ ಹಾಗೂ ಕಿಟಕಿಗಳನ್ನ ತೆರೆಯದ ಕೊಠಡಿಗಳಲ್ಲಿ ವಾಸಿಸುವ ಜನರಿಗೆ ಸೋಂಕು ಹರಡುವ ಅಪಾಯ ಹೆಚ್ಚು ಎಂದು ಈ ಅಧ್ಯಯನ ಹೇಳಿದೆ.
ಲೈಸೆಸ್ಟರ್ ಯೂನಿವರ್ಸಿಟಿಯ ಲೇಖಕರಾದ ಜ್ಯೂಲಿಯನ್ ಟಾಂಗ್ ಹಾಗೂ ವರ್ಜಿನಿಯಾ ಟೆಕ್ನ ಲಿನ್ಸೆ ಮಾರ್ ಹೇಳುವಂತೆ ಇಬ್ಬರು ವ್ಯಕ್ತಿಗಳು ಹತ್ತಿರದಲ್ಲಿದ್ದಾಗ ಅವರಿಬ್ಬರ ನಡುವಿನ ಏರೋಸೊಲ್ಸ್ ಕೂಡ ಹತ್ತಿರದಲ್ಲಿ ಇರುತ್ತವೆ. ಇದೊಂದು ರೀತಿಯಲ್ಲಿ ಧೂಮಪಾನಿಯ ಬಳಿ ಇದ್ದಂತೆ ಎಂದು ಹೇಳಿದ್ದಾರೆ.
ಕೊರೊನಾ ಸಾಂಕ್ರಮಿಕದ ಆರಂಭದಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಸೇರಿದಂತೆ ವಿವಿಧ ಇಲಾಖೆಗಳು ನೀಡಿರುವ ಮಾಹಿತಿಯ ಪ್ರಕಾರ ಸೋಂಕಿತನ ಉಸಿರಾಟದಿಂದಲೂ ವಾತಾವರಣಕ್ಕೆ ವೈರಸ್ ಹರಡಬಹುದು ಎಂದು ಅಂದಾಜಿಸಿದ್ದರು. ಇದಾದ ಬಳಿಕ ಈ ಹೇಳಿಕೆಯನ್ನ ವಾಪಸ್ ಪಡೆಯಲಾಗಿತ್ತು.
ಬಿಎಂಜೆ ಹೇಳುವಂತೆ ಮಾಸ್ಕ್, ಸಾಮಾಜಿಕ ಅಂತರ, ಒಳಾಂಗಣದಲ್ಲಿ ಪ್ರಾಶಸ್ತ್ಯ ಜಾಗಗಳು ಸೋಂಕು ಹರಡುವಿಕೆಯನ್ನ ಕಡಿಮೆ ಮಾಡಬಲ್ಲದು ಎಂದು ಹೇಳಿದ್ದಾರೆ.