ಸಮುದ್ರ ಮಟ್ಟದಿಂದ 35,000 ಅಡಿ ಆಳಕ್ಕೆ ಜಿಗಿದ ಅಮೆರಿಕದ ನಾಸಾ ಗಗನಯಾತ್ರಿ ಕ್ಯಾಥರಿನ್ ಸುಲ್ಲಿವನ್, ಭೂಮಿಯ ಮೇಲೆ ಇರುವ ಅತ್ಯಂತ ಆಳದ ಬಿಂದು ತಲುಪಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಬಾಹ್ಯಾಕಾಶದಲ್ಲಿ ನಡೆದ ಮೊದಲ ಅಮೆರಿಕನ್ ಮಹಿಳೆ ಎಂಬ ಶ್ರೇಯಕ್ಕೆ ಪಾತ್ರರಾದ 37 ವರ್ಷಗಳ ಬಳಿಕ, ಭೂಮಿ ಮೇಲಿನ ಅತ್ಯಂತ ಆಳಕ್ಕೆ ಇಳಿದ ಮಹಿಳೆ ಎಂಬ ಹೆಗ್ಗಳಿಕೆಗೆ 68ರ ಕ್ಯಾಥರಿನ್ ಪಾತ್ರರಾಗಿದ್ದಾರೆ. ಈ ವೇಳೆ ಅವರೊಂದಿಗೆ ಸಹ ಪೈಲಟ್ ವಿಕ್ಟರ್ ವೆಸ್ಕೋವೋ ಜೊತೆಯಲ್ಲಿದ್ದರು.
ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದೊಂದಿಗೆ ನಿರಂತರ ಸಂಪರ್ಕ ಕಾಪಾಡಿಕೊಂಡು ’ಲಿಮಿಟಿಂಗ್ ಫ್ಯಾಕ್ಟರ್’ ಎಂಬ ವಿಶೇಷ ವಾಹನದಲ್ಲಿ ಸುಲ್ಲಿವನ್ ಸಾಗರದ ತಳ ಮುಟ್ಟಿದ್ದಾರೆ.
ಮಾರಿಯಾನಾ ಟ್ರೆಂಚ್ ಎಂಬಲ್ಲಿ ಇರುವ ಚಾಲೆಂಜರ್ ಡೀಪ್ ಎಂಬ ಭೂಮಿ ಮೇಲಿನ ಅತ್ಯಂತ ಆಳವಾದ ಈ ಜಾಗಕ್ಕೆ 1960ರಲ್ಲಿ ಡಾನ್ ವಾಲ್ಷ್ ಹಾಗೂ ಜಾಕ್ಸ್ ಪಿಕರ್ಡ್ ಎಂಬಿಬ್ಬರು ಮೊದಲ ಬಾರಿಗೆ ಭೇಟಿ ನೀಡಿದ್ದರು.