alex Certify ಕೊರೊನಾದಿಂದ ಕೆಲಸ ಕಳೆದುಕೊಂಡ ಪೈಲಟ್​ ಈಗ ಹೋಟೆಲ್‌ ಉದ್ಯಮಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾದಿಂದ ಕೆಲಸ ಕಳೆದುಕೊಂಡ ಪೈಲಟ್​ ಈಗ ಹೋಟೆಲ್‌ ಉದ್ಯಮಿ

ಕೊರೊನಾ ವೈರಸ್​ನಿಂದಾಗಿ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದ ಅನೇಕ ಸಂಸ್ಥೆಗಳು ತಮ್ಮ ಉದ್ಯೋಗಿಗಳನ್ನ ಕೆಲಸದಿಂದ ತೆಗೆದುಹಾಕಿವೆ.

ಅದೇ ರೀತಿ ಏರ್ಲೈನ್ಸ್​​ನಲ್ಲಿ ಕೆಲಸ ಮಾಡುತ್ತಿದ್ದ ಅನೇಕರಿಗೆ ಉದ್ಯೋಗಕ್ಕೂ ಕತ್ತರಿ ಬಿದ್ದಿದೆ.

ಮಲೇಷಿಯಾದ ಪೈಲಟ್​ ಅಝ್ರಿನ್​ ಮೊಹಮ್ಮದ್​ ಜವಾವಿ ಎಂಬವರು ಕೊರೊನಾದಿಂದಾಗಿ ತಮ್ಮ ಕೆಲಸವನ್ನ ಕಳೆದುಕೊಂಡಿದ್ರೂ ಸಹ ಧೃತಿಗೆಡದೇ ತಮ್ಮ ಹೋಟೆಲ್​ ಉದ್ಯಮ ಮುಂದುವರಿಸಿದ್ದಾರೆ.

ನಿತ್ಯ ಪೈಲಟ್​ ರೀತಿಯಲ್ಲೇ ತಯಾರಾಗುವ 44 ವರ್ಷದ ಅಜ್ರಿನ್​ ಕುಯಾಲಾ ಲಂಪುರ್​​ದಲ್ಲಿ ಹೋಟೆಲ್​ ಉದ್ಯಮ ಆರಂಭಿಸಿದ್ದಾರೆ. ಇನ್ನು ಈ ಬಗ್ಗೆ ಅಜ್ರಿನ್​ರನ್ನ ಕೇಳಿದ್ರೆ, ನನ್ನನ್ನ ಪೈಲಟ್​ ಕೆಲಸದಿಂದ ತೆಗೆಯಲಾಯ್ತು. ಆದರೆ ನನಗೆ ಬದುಕೋಕೆ ಒಂದು ಉದ್ಯೋಗ ಬೇಕಿತ್ತು. ಹೀಗಾಗಿ ನನ್ನ ತಂದೆ ಮಾಡುತ್ತಿದ್ದ ಉದ್ಯೋಗವನ್ನ ಆರಂಭಿಸಿದೆ ಅಂತಾ ಹೇಳಿದ್ರು.

ಪೈಲಟ್​ ಧಿರಿಸಿನಲ್ಲಿ ಹೋಟೆಲ್​ನಲ್ಲಿರುವ ಅಜ್ರಿನ್​ ಫೋಟೋವನ್ನ ಅವರ ಪತ್ನಿ ಸೋಶಿಯಲ್​ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದು ಸಿಕ್ಕಾಪಟ್ಟೆ ವೈರಲ್​ ಆಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...