ಪಾಕಿಸ್ತಾನದ ಏಕಾಂಗಿ ಆನೆ ಕಾವನ್ ಸೋಮವಾರ ಸರಕು ವಿಮಾನದ ಮೂಲಕ ಕಾಂಬೋಡಿಯಾಗೆ ಬಂದಿಳಿದಿದೆ. ಕಾಂಬೋಡಿಯಾದ ಸ್ಥಳೀಯ ಅಭಯಾರಣ್ಯದಲ್ಲಿ ಕವಾನ್ ಹೊಸ ಜೀವನ ಆರಂಭಿಸಿದೆ. ಸಹಚಚರಿಲ್ಲದೇ ಮೃಗಾಲಯದಲ್ಲಿ ಏಕಾಂಗಿಯಾಗಿದ್ದ ಕವಾನ್ನ ಬಿಡುಗಡೆಗೆ ಆಗ್ರಹಿಸಿದ ಗಾಯಕಿ ಚೆರ್ ಅನೇಕ ವರ್ಷಗಳ ಕಾಲ ಕ್ಯಾಂಪೇನ್ ನಡೆಸಿದ್ದರು.
ಕಾಂಬೋಡಿಯಾಗೆ ಆನೆಯನ್ನ ಸ್ವಾಗತಿಸಲು ಸ್ವತಃ ಅಮೆರಿಕದ ಗಾಯಕಿ ಚೆರ್ ಸೀಮ್ ರೀಪ್ನ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ರು. ಕಾವನ್ನ ಈ ಸುದೀರ್ಘ ಪ್ರಯಾಣದಲ್ಲಿ ಅದಕ್ಕೆ ಯಾವುದೇ ರೀತಿ ಕಿರಿಕಿರಿಯಾಗೋದನ್ನ ತಪ್ಪಿಸುವ ಸಲುವಾಗಿ ಅದಕ್ಕೆ 200 ಕೆಜಿಗಿಂತಲೂ ಅಧಿಕ ಆಹಾರದ ವ್ಯವಸ್ಥೆ ಮಾಡಲಾಗಿತ್ತು.
36 ವರ್ಷದ ಕಾವನ್ ಸಹಚರರೇ ಇಲ್ಲದೇ ಇಸ್ಲಾಮಾಬಾದ್ ಮೃಗಾಲಯದಲ್ಲಿ ಏಕಾಂಗಿಯಾಗಿ ಜೀವನ ಸಾಗಿಸುತ್ತಿದ್ದ. ಇದೀಗ ಆತನಿಗೆ ಬಿಡುಗಡೆ ದೊರಕಿದಂತಾಗಿದೆ ಅಂತಾ ಪ್ರಾಣಿಗಳ ರಕ್ಷಣಾ ಸಂಸ್ಥೆಯಾದ ಫೋರ್ ಪಾವ್ಸ್ ಹೇಳಿದೆ.