ಬಂದೂಕು ಹಿಡಿದು ಜೀವದ ಜೊತೆ ಚೆಲ್ಲಾಟವಾಡುವ ಸಾಂಪ್ರದಾಯಿಕ ನೃತ್ಯದ ವಿಡಿಯೋ ವೈರಲ್ 24-04-2021 6:21AM IST / No Comments / Posted In: Latest News, International ಸೌದಿ ಅರೇಬಿಯಾದ ಕೆಲ ಪುರುಷರು ಸಾಂಪ್ರದಾಯಿಕ ಯುದ್ಧ ನೃತ್ಯ ತಾಶೀರ್ ಪ್ರದರ್ಶಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬಂದೂಕಿನೊಂದಿಗೆ ಮಾಡುವ ನೃತ್ಯ ಇದಾಗಿದೆ. ಇದೊಂದು ಅಪಾಯಕಾರಿ ನೃತ್ಯವಾದರೂ ಸಹ ತಮ್ಮ ಪಾದಗಳ ಬಳಿ ಸೌದಿ ಜನತೆ ಬಂದೂಕಿನಿಂದ ಶೂಟ್ ಮಾಡಿಕೊಳ್ತಿರೋದನ್ನ ನೀವು ನೋಡಬಹುದಾಗಿದೆ. ಶತಮಾನಗಳ ಹಿಂದಿನ ಸಾಂಪ್ರದಾಯಿಕ ನೃತ್ಯವನ್ನ ಸೌದಿ ಅರೇಬಿಯಾದ ವಿವಿಧ ಕಾರ್ಯಕ್ರಮಗಳಲ್ಲಿ ಮಾಡಲಾಗುತ್ತೆ. ಅಲ್ಲಿನ ಸಾಂಪ್ರದಾಯಿಕ ಉಡುಗೆ ಧರಿಸುವ ಪುರುಷರು ಬಂದೂಕಿಗೆ ಗುಂಡಿನ ಬದಲಾಗಿ ಗನ್ಪೌಡರ್ನ್ನು ತುಂಬಿಸುತ್ತಾರೆ. ಬಳಿಕ ನೆಲಕ್ಕೆ ಮುಖಕ್ಕೆ ಮಾಡಿ ಫೈರಿಂಗ್ ಮಾಡುತ್ತಾ ಹಾರುತ್ತಾರೆ. ಈ ನೃತ್ಯವನ್ನ ಬೆಂಕಿ ನೃತ್ಯ ಎಂದೂ ಕರೆಯಲಾಗುತ್ತೆ. ಇದನ್ನ ಹಬ್ಬ, ಮದುವೆ ಸೇರಿದಂತೆ ವಿವಿಧ ಕಾರ್ಯಕ್ರಮಗಳಲ್ಲಿ ಮಾಡಲಾಗುತ್ತೆ. The Taasheer folk dance is performed in the western Saudi Arabian province of Taif. Dancers load their guns with gunpowder without bullets, before taking centre stage to showcase their dancing skills. pic.twitter.com/upAitDTiaO — South China Morning Post (@SCMPNews) April 22, 2021