ಬರಾಕ್ ಒಬಾಮಾ ಆಡಳಿತಾವಧಿಯಲ್ಲಿ ಉಪಾಧ್ಯಕ್ಷರಾಗಿದ್ದ ಜೋ ಬಿಡೆನ್ ಅಮೆರಿಕ ಅಧ್ಯಕ್ಷೀಯ ಚುನಾವಣಾ ಫಲಿತಾಂಶಕ್ಕೂ ಮುನ್ನವೇ ಬರಾಕ್ ಒಬಾಮಾರ ಒಂದು ದಾಖಲೆಯನ್ನ ಚೂರು ಚೂರು ಮಾಡಿದ್ದಾರೆ.
ಅಮೆರಿಕ ಚುನಾವಣೆಯಲ್ಲಿ 70.7 ಮಿಲಿಯನ್ ಕ್ಕಿಂತ ಹೆಚ್ಚು ಮತಗಳನ್ನ ಬಾಚಿಕೊಳ್ಳುವ ಮೂಲಕ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ ಅಭ್ಯರ್ಥಿಗಳಲ್ಲೇ ಅತಿ ಹೆಚ್ಚು ಮತ ಪಡೆದ ವ್ಯಕ್ತಿ ಎನಿಸಿಕೊಂಡಿದ್ದಾರೆ.
2008ರಲ್ಲಿ ಒಬಾಮಾ ಪಡೆದ್ದಕ್ಕಿಂತ 300000 ಹೆಚ್ಚಿನ ಮತಗಳನ್ನ ಜೋ ಬಿಡೆನ್ ಪಡೆದಿದ್ದಾರೆ.
ಹಾಲಿ ಅಧ್ಯಕ್ಷ ಟ್ರಂಪ್ ವಿರುದ್ಧ ಸ್ಪರ್ಧಿಸಿರುವ ಜೋ ಬಿಡೆನ್ ಈಗಾಗಲೇ ಟ್ರಂಪ್ಗಿಂತ ಹೆಚ್ಚಿನ ಮತಗಳನ್ನ ಪಡೆದು ಮುನ್ನುಗ್ಗುತ್ತಿದ್ದಾರೆ. ಈಗಾಗಲೇ 64ರಷ್ಟು ಮತ ಎಣಿಕೆ ಕಾರ್ಯ ಪೂರ್ಣಗೊಂಡಿದ್ದು ಇಲ್ಲಿಯವರೆಗಿನ ಲೆಕ್ಕಾಚಾರದಲ್ಲಿ ಟ್ರಂಪ್ಗಿಂತ ಬಿಡೆನ್ ಮುನ್ನಡೆ ಸಾಧಿಸಿದ್ದಾರೆ.