
ಆಪಲ್ ಸಹ ಸಂಸ್ಥಾಪಕ ಸ್ಟೀವ್ ಜಾಬ್ಸ್ ಅವರು 1973ರಲ್ಲಿ ತಮ್ಮ ಕೈಬರಹದಲ್ಲಿ ಬರೆದಿದ್ದ ಉದ್ಯೋಗದ ಅರ್ಜಿಯೊಂದನ್ನು ಹರಾಜಿಗೆ ಇಡಲಾಗುತ್ತಿದೆ. ಜಾಬ್ಸ್ ಈ ಅರ್ಜಿ ಮೂಲಕ ಯಾವ ಕೆಲಸ ಸೇರಲು ಆಶಿಸಿದ್ದಾರೆ ಎಂದು ಸ್ಪಷ್ಟವಾಗಿ ತಿಳಿದಿಲ್ಲ.
ರೀಡ್ಸ್ ಕಾಲೇಜ್‌ನಲ್ಲಿ ಜಾಬ್ಸ್ ಇಂಗ್ಲಿಷ್ ಸಾಹಿತ್ಯದ ವಿದ್ಯಾರ್ಥಿ ಎಂದು ಅರ್ಜಿಯಲ್ಲಿ ತಿಳಿಯಬಹುದಾಗಿದೆ. ಕಂಪ್ಯೂಟರ್, ಕ್ಯಾಲ್ಕುಲೇಟರ್, ವಿನ್ಯಾಸ ಹಾಗೂ ತಂತ್ರಜ್ಞಾನದಲ್ಲಿ ತಮಗೆ ಕೌಶಲ್ಯ ಇರುವುದಾಗಿ ಜಾಬ್ಸ್ ಅರ್ಜಿಯಲ್ಲಿ ತಿಳಿಸಿದ್ದಾರೆ.
ರಾಹುಲ್ ಆಟೋಗ್ರಾಫ್ ನೀಡಿದ್ದಕ್ಕೆ ಭಾವುಕಳಾದ ವಿದ್ಯಾರ್ಥಿನಿ
ಎಲೆಕ್ಟ್ರಾನಿಕ್ ತಂತ್ರಜ್ಞಾನ ಹಾಗೂ ಡಿಸೈನ್ ಇಂಜಿನಿಯರಿಂಗ್‌ನಲ್ಲಿ ತಮಗೆ ವಿಶೇಷ ಕೌಶಲ್ಯ ಇರುವುದಾಗಿ ಜಾಬ್ಸ್ ನಮೂದಿಸಿದ್ದಾರೆ. ತಮ್ಮ ಬಳಿ ಡ್ರೈವಿಂಗ್ ಲೈಸೆನ್ಸ್ ಇದ್ದು, ಯಾವುದೇ ದೂರವಾಣಿ ಇಲ್ಲವೆಂದು ಜಾಬ್ಸ್ ಹೇಳಿಕೊಂಡಿದ್ದಾರೆ. ಚಾರ್ಟ್ಸ್‌ಫೀಲ್ಡ್ ಹರಾಜು ಜಾಲತಾಣದಲ್ಲಿ ಈ ಅರ್ಜಿ ಮಾರಾಟಕ್ಕಿದೆ.