alex Certify ರಾಹುಲ್​ ಆಟೋಗ್ರಾಫ್​ ನೀಡಿದ್ದಕ್ಕೆ ಭಾವುಕಳಾದ ವಿದ್ಯಾರ್ಥಿನಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾಹುಲ್​ ಆಟೋಗ್ರಾಫ್​ ನೀಡಿದ್ದಕ್ಕೆ ಭಾವುಕಳಾದ ವಿದ್ಯಾರ್ಥಿನಿ

ಪುದುಚೆರಿಯಲ್ಲಿ 2 ದಿನಗಳ ಪ್ರವಾಸ ಕೈಗೊಂಡ ಕಾಂಗ್ರೆಸ್​ ಸಂಸದ ರಾಹುಲ್​ ಗಾಂಧಿ ಭಾರತಿದಾಸನ್​ ಸರ್ಕಾರಿ ಹೆಣ್ಣು ಮಕ್ಕಳ ಕಾಲೇಜಿನಲ್ಲಿ ಚುನಾವಣೆ ಸಂಬಂಧ ಸಂವಾದ ಕಾರ್ಯಕ್ರಮ ನಡೆಸಿದ್ದಾರೆ.

ಈಗಾಗಲೇ ಈ ಸಂವಾದ ಕಾರ್ಯಕ್ರಮದ ಸಾಕಷ್ಟು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗ್ತಿದೆ.

ಕಾರ್ಯಕ್ರಮದಲ್ಲಿ ಓರ್ವ ವಿದ್ಯಾರ್ಥಿನಿ ರಾಹುಲ್​ ಗಾಂಧಿ ಬಳಿ ಆಟೋಗ್ರಾಫ್​ ಕೇಳಿದ್ದಾರೆ. ಕೂಡಲೇ ವಿದ್ಯಾರ್ಥಿನಿ ಬಳಿ ಬಾಗಿ ರಾಹುಲ್​ ಗಾಂಧಿ ಆಟೋಗ್ರಾಫ್​ ನೀಡಿದ್ದಾರೆ.

ರಾಹುಲ್​ ಗಾಂಧಿ ಆಟೋಗ್ರಾಫ್​ ನೀಡುತ್ತಿದ್ದ ವೇಳೆ ವಿದ್ಯಾರ್ಥಿನಿಯ ಸಂತೋಷಕ್ಕೆ ಪಾರವೇ ಇರಲಿಲ್ಲ. ಆನಂದಬಾಷ್ಪ ಹರಿಸುತ್ತಿದ್ದ ವಿದ್ಯಾರ್ಥಿನಿಯ ಬಳಿ ಬಂದ ರಾಹುಲ್​ ಗಾಂಧಿ ಆಕೆಯ ಜೊತೆ ಕ್ಯಾಮರಾಗೆ ಪೋಸ್​ ನೀಡಿದ್ದಾರೆ.

 ಸಿಎಂ ಯಡಿಯೂರಪ್ಪರಿಗೆ ಬಿಜೆಪಿ ಹೈಕಮಾಂಡ್ ಗುಡ್ ನ್ಯೂಸ್

ಟ್ವಿಟರ್​ನಲ್ಲಿ ಈ ವಿಡಿಯೋವನ್ನ ಸಾಕಷ್ಟು ಕಾಂಗ್ರೆಸ್​ ಕಾರ್ಯಕರ್ತರು ಶೇರ್​ ಮಾಡಿದ್ದಾರೆ. ಕಾಂಗ್ರೆಸ್​ ಸಾಮಾಜಿಕ ಮಾಧ್ಯಮದ ಕನ್ವೀನರ್​ ರುಚಿರಾ ಚತುರ್ವೇದಿ, ಪುದುಚೇರಿಯ ಭಾರತಿದಾಸನ್​ ಕಾಲೇಜಿನ ಯುವ ವಿದ್ಯಾರ್ಥಿನಿ ರಾಹುಲ್​ ಗಾಂಧಿ ಬಳಿ ಆಟೋಗ್ರಾಫ್​ ಪಡೆಯುತ್ತಿದ್ದ ವೇಳೆ ಸಂತೋಷದಿಂದ ಕಣ್ಣೀರು ಹಾಕಿದ್ದಾರೆ. ಈ ದೃಶ್ಯ ತುಂಬಾನೇ ಹೃದಯಸ್ಪರ್ಶಿಯಾಗಿದೆ ಎಂದು ಶೀರ್ಷಿಕೆ ನೀಡಿದ್ದಾರೆ.

ಈ ವಿಡಿಯೋವನ್ನ ಇಷ್ಟಪಟ್ಟವರ ಗುಂಪು ಒಂದಡೆಯಾದರೆ ಇದು ಚುನಾವಣಾ ಗಿಮಿಕ್​ ಎಂದು ಅನೇಕರು ಜರಿದಿದ್ದಾರೆ.

— Ruchira Chaturvedi (@RuchiraC) February 17, 2021

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...