ಟೊಕಿಯೋ: ಕೊರೊನಾ ಕಂಟಕದ ಭೀಕರತೆಯನ್ನು ಜಪಾನ್ ಕಂಪನಿಯೊಂದು ನಾಟಕೀಯವಾಗಿ ಜನರಿಗೆ ವಿವರಿಸುತ್ತಿದೆ. ಶವ ಪೆಟ್ಟಿಗೆಯಿಂದ ಆವರಿಸಿದ ಸೋಮಾರಿಗಳ ಮೂಲಕ ಅದನ್ನು ವಿವರಿಸಲಾಗುತ್ತಿದೆ.
ಟೊಕಿಯೋದ ಜನ ಎರಡು ಮೀಟರ್ ಅಂತರದಲ್ಲಿ ನಿಂತು ಕಿಟಕಿಯೊಂದರಿಂದ ಭಯಭೀತಗೊಳಿಸುವ ಧ್ವನಿ ಕೇಳುವ ಜತೆಗೆ ಕಲಾವಿದರ ನಟನೆಯನ್ನು ನೋಡಬಹುದಾಗಿದೆ. ನಕಲಿ ಕೈಗಳು, ನೀರಿನಿಂದ ಭಯಗೊಳಿಸುವ ಸನ್ನಿವೇಶಗಳು ಈ ಶೋನಲ್ಲಿವೆ.
“ಕೊರೊನಾ ವೈರಸ್ ಕಾರಣದಿಂದ ಜನ ಚಿಂತಿತರಾಗಿದ್ದಾರೆ. ಅದನ್ನು ದೂರ ಮಾಡಲು ಈ ಪ್ರಯತ್ನ ಮಾಡಿದ್ದೇವೆ” ಎಂದು ಕವಾಗರಾಸೆತೈ ಎಂಬ ಪ್ರೊಡಕ್ಷನ್ ಕಂಪನಿಯ ಕೋ ಆರ್ಡಿನೇಟರ್ ಕೆಂಟಾ ಇವಾನಾ ತಿಳಿಸಿದ್ದಾರೆ.