alex Certify ಬಾಹ್ಯಾಕಾಶ ನಿಲ್ದಾಣದಿಂದ ಸೆರೆಯಾಯ್ತು ಅಪರೂಪದ ಫೋಟೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಾಹ್ಯಾಕಾಶ ನಿಲ್ದಾಣದಿಂದ ಸೆರೆಯಾಯ್ತು ಅಪರೂಪದ ಫೋಟೋ

ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿರುವ ಅನೇಕ ಗಗನಯಾತ್ರಿಗಳು ಸಾಮಾನ್ಯವಾಗಿ ಅಲ್ಲಿಂದ ಭೂಮಿಯ ಫೋಟೋವನ್ನ ಕ್ಲಿಕ್ಕಿಸುತ್ತಾರೆ. ಅಲ್ಲದೇ ಈ ಫೋಟೋಗಳು ನೋಡೋಕೆ ತುಂಬಾನೇ ಕುತೂಹಲಕಾರಿಯಾಗಿರೋದ್ರಿಂದ ಇಂತಹ ಫೋಟೋಗಳು ಸಖತ್​​ ವೈರಲ್​ ಆಗುತ್ತವೆ.

ಇದೇ ರೀತಿ ಜಪಾನ್​ನ ಗಗನರಾತ್ರಿ ಸೊಯ್ಚಿ ನಗುಚಿ ಎಂಬವರು ತಮ್ಮ ಕೊನೆಯ ಬಾಹ್ಯಾಕಾಶ ದಿನದಂದು ತೆಗೆದ ಕುತೂಹಲಕಾರಿ ಫೋಟೋವೊಂದನ್ನ ಶೇರ್​ ಮಾಡಿದ್ದಾರೆ. ಈ ಫೋಟೋದಲ್ಲಿ ಯುನೆಸ್ಕೋ ಗುರುತಿಸಿದ ಪಾರಂಪರಿಕ ತಾಣ ಸೇರಿದಂತೆ ಸಾಕಷ್ಟು ಪ್ರದೇಶಗಳನ್ನ ಗುರುತಿಸಬಹುದಾಗಿದೆ.

ʼಸ್ಮಾರ್ಟ್ ಫೋನ್ʼ ಬಳಕೆ ವೇಳೆ ಇರಲಿ ಈ ಎಚ್ಚರಿಕೆ…..!

ನೀವು ಈ ಫೋಟೋವನ್ನ ಸೂಕ್ಷ್ಮವಾಗಿ ಗಮನಿಸಿದ್ರೆ ನೀವು ಎರಡು ತ್ರಿಕೋನಾಕಾರದ ಆಕೃತಿಗಳನ್ನ ಕಾಣುತ್ತೀರಾ. ಇವು ಈಜಿಪ್ಟ್​​ನ ಇತಿಹಾಸ ಪ್ರಸಿದ್ಧ ಪಿರಾಮಿಡ್​ಗಳಾಗಿವೆ. ಇವು ಯುನೆಸ್ಕೋದಿಂದ ಮಾನ್ಯತೆ ಪಡೆದ ಪಾರಂಪರಿಕ ತಾಣ ಮಾತ್ರವಲ್ಲದೇ ವಿಶ್ವದ ಅತ್ಯಂತ ಹಳೆಯ ಸ್ಮಾರಕವಾಗಿದ್ದು ವಿಶ್ವದ 7 ಅದ್ಭುತಗಳಲ್ಲಿ ಸ್ಥಾನ ಪಡೆದಿದೆ.

ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದ ಕೊನೆಯ ದಿನದಂದು ನಾನು ಗಿಜಾ ಪಿರಾಮಿಡ್​ನ ಅದ್ಭುತ ಚಿತ್ರಣವನ್ನ ಸೆರೆ ಹಿಡಿದೆ ಎಂದು ಶೀರ್ಷಿಕೆ ನೀಡಲಾಗಿದ್ದು ಈ ಫೋಟೋ ಸಖತ್​ ವೈರಲ್​ ಆಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...