ಗುಂಡಮ್, ಸೂಪರ್ ಮಾರಿಯೋ, ಪೋಕ್ಮನ್ ಸೇರಿದಂತೆ ಅತ್ಯಾಕರ್ಷಕ ರೋಬೋಟ್, ಆನಿಮೇಷನ್ ಸ್ಕಿಲ್ನಲ್ಲಿ ಜಪಾನ್ ಬಿಟ್ಟರೆ ಮತ್ತೊಂದು ರಾಷ್ಟ್ರವಿಲ್ಲ. ಇದೀಗ ಇನ್ನೂ ಒಂದು ಹಂತ ಮುಂದೆ ಹೋಗಿರೋ ಜಪಾನ್, ಜಮೀನಿನಲ್ಲಿ ಫಸಲನ್ನ ರಕ್ಷಿಸೋಕೆ ರೊಬೋಟ್ ತಂತ್ರಜ್ಞಾನ ಬಳಸುತ್ತಿದೆ.
ನ್ಯೂಯಾರ್ಕ್ ಪೋಸ್ಟ್ ಇತ್ತೀಚೆಗೆ ವಿಡಿಯೋವೊಂದನ್ನ ಪೋಸ್ಟ್ ಮಾಡಿದ್ದು ಇದರಲ್ಲಿ ಜಮೀನಿನ ರಕ್ಷಣೆಗೆಂದು ತೋಳದ ಮಾದರಿಯ ರೊಬೋಟ್ನ್ನ ಇರಿಸಲಾಗಿದೆ. ಕೆಂಪು ಬಣ್ಣದ ಕಣ್ಣಿನ ಈ ರೋಬೋಟ್ ತೋಳ, ಕಾಡು ಪ್ರಾಣಿಗಳಿಂದ ಜಮೀನನ್ನ ರಕ್ಷಣೆ ಮಾಡುತ್ತದೆಯಂತೆ.
ಓಹ್ತಾ ಸೀಕಿ ಎಂಬವರು ಈ ರೋಬೋಟ್ನ್ನ ವಿನ್ಯಾಸಗೊಳಿಸಿದ್ದು, ಸಂವೇದಕಗಳ ಸಹಾಯದಿಂದ ಇದು ತಲೆ ಅಲ್ಲಾಡಿಸೋದು ಹಾಗೂ ಪ್ರಾಣಿಗಳನ್ನ ಕಂಡೊಡನೆಯೇ ಕೂಗುವ ಕೆಲಸವನ್ನ ಮಾಡುತ್ತೆ. ಇದರ ಕೋರೆ ಹಲ್ಲುಗಳು ಕರಡಿಯನ್ನೂ ಹೆದರಿಸಿ ಜಮೀನಿನಿಂದ ಓಡಿಸಿದೆ.
ಹೊಕ್ಕೈಡೋ ಹಾಗೂ ಒಕಿನಾವಾ ಪ್ರದೇಶಗಳಲ್ಲಿರುವ ಜಮೀನುಗಳಲ್ಲಿ ಈ ರೊಬೋಟ್ ತೋಳಗಳನ್ನ ನಿಲ್ಲಿಸಲಾಗಿದೆ.