
ಇದರಲ್ಲಿ ವಿಶೇಷ ಏನಿದೆ ಎಂಬ ಪ್ರಶ್ನೆ ಮೂಡೋದು ಸಹಜ. ಆದರೆ ಈ ಫೋಟೋ ಜೊತೆ ಆಕೆ ಟ್ಯಾಗ್ ಮಾಡಿರೋ ಕೆಲ ಖಾತೆಗಳು ಟ್ವೀಟಿಗರನ್ನ ಗೊಂದಲಕ್ಕೀಡು ಮಾಡಿದೆ.
ಸೋಮವಾರ ತಂದೆ ಜೊತೆ ಜಾರ್ಜಿಯಾಗೆ ಪ್ರಯಾಣ ಬೆಳೆಸಿದ್ದ ಇವಾಂಕಾ ಏರ್ ಫೋರ್ಸ್ನಲ್ಲಿದ್ದಾಗ ತಮ್ಮ ತಂದೆಯೊಂದಿಗೆ ತೆಗೆದ ಸೆಲ್ಫಿಯನ್ನ ಪೋಸ್ಟ್ ಮಾಡಿದ್ದಾರೆ. ಅಲ್ಲದೇ ಹೊರಬಂದು ಜಾರ್ಜಿಯಾಗೆ ಮತ ನೀಡಿ ಎಂದು ಶೀರ್ಷಿಕೆಯನ್ನೂ ಕೊಟ್ಟಿದ್ದಾರೆ.
ಈ ಫೋಟೋಗೆ ಇವಾಂಕಾ ರಿಪಬ್ಲಿಕನ್ ಪಾರ್ಟಿ, ಜಾರ್ಜಿಯಾ ಸೆನೆಟರ್ಗಳಾದ ಡೇವಿಡ್ ಪರ್ಡ್ಯೂ ಹಾಗೂ ಕೆಲ್ಲಿ ಲೋಫ್ ಮತ್ತು ಶ್ವೇತಭವನ ಸಹಾಯಕ ಡಾನ್ ಸ್ಕ್ಯಾವಿನೋ ಜ್ಯೂನಿಯರ್ನ್ನು ಟ್ಯಾಗ್ ಮಾಡಿದ್ದಾರೆ. ತನ್ನ ತಂದೆಯನ್ನ ಟ್ಯಾಗ್ ಮಾಡದ ಇವಾಂಕಾ ಗಾಯಕ ಹಾಗೂ ನಟ ಲೋಫ್ರನ್ನ ಈ ಫೋಟೋಗೆ ಟ್ಯಾಗ್ ಮಾಡೋದ್ರ ಮೂಲಕ ನೆಟ್ಟಿಗರ ತಲೆಗೆ ಹುಳ ಬಿಟ್ಟಿದ್ದಾರೆ. ಈ ತಪ್ಪನ್ನ ಗಮನಿಸಿದ ನೆಟ್ಟಿಗರು ಈ ಫೋಟೋವನ್ನ ವೈರಲ್ ಮಾಡೋದ್ರ ಜೊತೆಗೆ ಮೀಟ್ ಲೋಫ್ರನ್ನೂ ಟ್ರೆಂಡಿಂಗ್ನಲ್ಲಿರಿಸಿದ್ದಾರೆ.