alex Certify ವಿಡಿಯೋ ಗೇಮ್ ಪ್ರಿಯರಿಗೆ ಖುಷಿ ನೀಡುತ್ತೆ ಈ ಸುದ್ದಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಡಿಯೋ ಗೇಮ್ ಪ್ರಿಯರಿಗೆ ಖುಷಿ ನೀಡುತ್ತೆ ಈ ಸುದ್ದಿ

ವಿಡಿಯೋ ಗೇಮ್ಸ್ ಅಂದ್ರೆ ಸಾಕು ಅದರ ಬಗ್ಗೆ ನೆಗೆಟಿವ್​ ಕಮೆಂಟ್ಸ್ ಕೊಡೋರೇ ಜಾಸ್ತಿ. ಆದರೆ ಆಕ್ಸ್​ಫರ್ಡ್ ವಿಶ್ವವಿದ್ಯಾಲಯ ನಡೆಸಿದ ಹೊಸ ಅಧ್ಯಯನದಲ್ಲಿ ವಿಡಿಯೋ ಗೇಮ್​​ನಿಂದ ಮಾನಸಿಕ ಆರೋಗ್ಯ ಸುಧಾರಿಸುತ್ತೆ ಎಂಬ ಹೊಸ ಅಂಶ ಬಯಲಾಗಿದೆ.

ವಿಡಿಯೋ ಗೇಮ್​ಗಳ ವಿಚಾರದಲ್ಲಿ ಪಾಸಿಟಿವ್​ ಫಲಿತಾಂಶ ನೀಡಿದ ಮೊದಲ ಅಧ್ಯಯನ ಇದಾಗಿದೆ. ಸುಮಾರು 3274 ಮಂದಿ ಮೇಲೆ ಈ ಸಮೀಕ್ಷೆ ನಡೆಸಲಾಗಿತ್ತು. ಸಮೀಕ್ಷೆಯಡಿಯಲ್ಲಿ ಸಂಶೋಧಕರು ಇವರಿಗೆಲ್ಲ ವಿಶ್ವದ ಪ್ರಸಿದ್ಧ ವಿಡಿಯೋ ಗೇಮ್​ಗಳಾದ ಪ್ಲಾಂಟ್ಸ್ ವರ್ಸಸ್​​ ಜೋಂಬಿನ್​ ಹಾಗೂ ಆನಿಮಲ್​ ಕ್ರಾಸಿಂಗ್​​ ಎಂಬ 2 ಗೇಮ್​​ಗಳನ್ನ ಬಳಸಿಕೊಂಡಿದ್ದರು. ಹಾಗೂ ಗೇಮರ್​ಗಳ ಮೇಲೆ ನಿಗಾ ಇಡಲಾಗಿತ್ತು.

ಈ ಅಧ್ಯಯನದ ಕೊನೆಯಲ್ಲಿ ವಿಡಿಯೋ ಗೇಮ್​​ನಿಂದ ಆರೋಗ್ಯದ ಮೇಲೆ ಯಾವುದೇ ರೀತಿಯ ಹಾನಿ ಉಂಟಾಗೋದಿಲ್ಲ ಎಂಬ ಅಚ್ಚರಿಯ ಫಲಿತಾಂಶ ಹೊರಬಿದ್ದಿದೆ. ವಿಡಿಯೋ ಗೇಮ್​ ಆಡುವಾಗ ಗೇಮರ್​ಗಳ ಮೇಲೆ ಗಮನಾರ್ಹ ಪರಿಣಾಮ ಬೀರುವ ಅಂಶಗಳು ಬೆಳಕಿಗೆ ಬಂದಿವೆ. ಗೇಮ್​ ವೇಳೆ ಆಟಗಾರರ ಅನುಭವಿಸಿದ ಭಾವನೆಗಳು ಮಾನಸಿಕ ಆರೋಗ್ಯದ ಮೇಲೆ ಸಕಾರಾತ್ಮಕ ಪರಿಣಾಮ ಬೀರುವಂತಿವೆ ಎಂದು ಅಧ್ಯಯನ ಹೇಳಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...