alex Certify ಸಂಗೀತ ಕಛೇರಿಯಲ್ಲಿ ಬ್ಯಾಟ್ ಮ್ಯಾನ್ – ಸ್ಪೈಡರ್ ಮ್ಯಾನ್ ಫುಲ್‌ ಬ್ಯುಸಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಂಗೀತ ಕಛೇರಿಯಲ್ಲಿ ಬ್ಯಾಟ್ ಮ್ಯಾನ್ – ಸ್ಪೈಡರ್ ಮ್ಯಾನ್ ಫುಲ್‌ ಬ್ಯುಸಿ

ನಾವು ಸಾಕಷ್ಟು ಜನರು ಕಥೆ ಪುಸ್ತಕಗಳಲ್ಲಿ, ಕಾರ್ಟೂನ್ ‌ಗಳಲ್ಲಿ ಇತ್ತೀಚೆಗೆ ಸಿನೆಮಾಗಳಲ್ಲಿ ಬರುವ ಸೂಪರ್ ಹೀರೊಗಳ ಅಭಿಮಾನಿಗಳು.

ಒಂದು ಕ್ಯಾಪ್, ಮಾಸ್ಕ್ ಹಾಕಿ ಸದೃಢ ಕಾಯ ಹೊಂದಿ, ಇತರರ ರಕ್ಷಣೆಗೆ ನಿಲ್ಲುವವರು ಇವರು ಎಂದು ದೃಶ್ಯಗಳಲ್ಲಿ ಬಿಂಬಿಸಲಾಗುತ್ತದೆ.

ವಂಡರ್ ಮ್ಯಾನ್, ಸೂಪರ್ ಮ್ಯಾನ್, ಸ್ಪೈಡರ್ ಮ್ಯಾನ್, ಬ್ಯಾಟ್ ಮ್ಯಾನ್, ಐರನ್ ಮ್ಯಾನ್, ಕ್ಯಾಪ್ಟನ್ ಅಮೆರಿಕಾ ಹೀಗೆ ಸೂಪರ್ ಹಿರೋಗಳ ಸಾಲೇ ಇದೆ. ಇವರಿಗೆ ಇಡೀ ವಿಶ್ವಾದ್ಯಂತ ಅಭಿಮಾನಿಗಳಿದ್ದಾರೆ. ಸೂಪರ್ ಹಿರೋಗಳ ಮಾದರಿಯ ಡ್ರೆಸ್‌ಗಳು ಸಾಕಷ್ಟು ಪ್ರಸಿದ್ಧಿ ಪಡೆದಿವೆ. ಯಾವ ಸೂಪರ್ ಹಿರೋ ಶ್ರೇಷ್ಠ ಎಂದು ಅಭಿಮಾನಿಗಳ ನಡುವೆ ಚರ್ಚೆ, ಸಂಘರ್ಷ ನಡೆಯುವುದೂ ಇದೆ.

ಸಾಮಾಜಿಕ ಜಾಲತಾಣಗಳಲ್ಲಿ ಇಂಥ ವಿಡಿಯೋವೊಂದು ನೆಟ್ಟಿಗರಿಗೆ ಮೋಜು ನೀಡಿದೆ. ರಸ್ತೆಯೊಂದರ ಪಕ್ಕ ಬ್ಯಾಟ್‌ ಮ್ಯಾನ್ ಕುಳಿತು ಚಿಕ್ಕ ಗಿಟಾರ್ ನುಡಿಸುತ್ತಿರುತ್ತಾನೆ. ಕೆಲ ಹೊತ್ತಿನ ಬಳಿಕ ಯುನಿಸೈಕಲ್ (ಒಂದೇ ಗಾಲಿಯ ಸೈಕಲ್) ನಲ್ಲಿ ಬರುವ ಸ್ಪೈಡರ್ ಮ್ಯಾನ್ ಧಿರಿಸು ಹಾಕಿಕೊಂಡ ವ್ಯಕ್ತಿ, ಬ್ಯಾಟ್ ಮ್ಯಾನ್ ಸುತ್ತು ಹಾಕಿ ಬ್ಯಾಗ್‌ಪೈಪರ್ ನುಡಿಸುತ್ತ ಆತನನ್ನು ಛೇಡಿಸುತ್ತಾನೆ. ಇಬ್ಬರ ನಡುವೆ ಸಂಗೀತ ಸ್ಪರ್ಧೆ ನಡೆದಂತಿದೆ. ರೆಕ್ಸ್ ಚಾಪ್‌ಮ್ಯಾನ್ ಎಂಬುವವರು ಟ್ವಿಟರ್‌ನಲ್ಲಿ ವಿಡಿಯೋ ಶೇರ್ ಮಾಡಿದ್ದು, 2.1 ಲಕ್ಷ ಜನ ವೀಕ್ಷಿಸಿದ್ದಾರೆ. 23 ಸಾವಿರ ಜನರು ಅದನ್ನು ರಿ ಟ್ವೀಟ್ ಮಾಡಿದ್ದಾರೆ. 65 ಸಾವಿರಕ್ಕೂ ಅಧಿಕ ಜನರು ಲೈಕ್ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...