ಇಟಲಿಯ ನೇಪಲ್ಸ್ ಚರ್ಚ್ನಿಂದ ಕಳುವು ಮಾಡಲಾಗಿದ್ದ ಲಿಯನಾರ್ಡೋ ಡಾ ವಿಂಚಿಯ ಏಸು ಕ್ರಿಸ್ತನ ’ಸಲ್ವಾಟಾರ್ ಮುಂಡಿ’ ಪೇಂಟಿಂಗ್ ಅನ್ನು ಪೊಲೀಸರು ಪತ್ತೆ ಮಾಡಿದ್ದಾರೆ.
16ನೇ ಶತಮಾನದ ಈ ಪೇಂಟಿಂಗ್ ಚರ್ಚ್ನಿಂದ ಕಳುವಾಗಿದೆ ಎಂಬ ವಿಷಯ ಖುದ್ದು ಚರ್ಚ್ನ ಪಾದ್ರಿಗಳಿಗೇ ಗೊತ್ತಿರಲಿಲ್ಲ. ಈ ಪೇಂಟಿಂಗ್ ಅಪಾರ್ಟ್ಮೆಂಟ್ ಒಂದರಲ್ಲಿ ಬಚ್ಚಿಡಲಾಗಿದ್ದು, ಪೊಲೀಸರ ಕಣ್ಣಿಗೆ ಬಿದ್ದಿದೆ. ಈ ಪೇಂಟಿಂಗ್ ಅನ್ನು ಹಾಗೇ ಸುಮ್ಮನೇ ಮಾರ್ಕೆಟ್ನಿಂದ ತಂದಿದ್ದಾಗಿ ಅಪಾರ್ಟ್ಮೆಂಟ್ ಮಾಲೀಕ ಕೊಟ್ಟ ಸಮಜಾಯಿಷಿಯಿಂದ ಸಮಾಧಾನಗೊಳ್ಳದ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ.
ಲಿಯನಾರ್ಡೋರ ಸಲ್ವಾಟರ್ ಮುಂಡಿ (ಜಗದ ರಕ್ಷಕ) ಕಾಪಿಯಾದ ಈ ಪೇಂಟಿಂಗ್ ಅನ್ನು 2017ರಲ್ಲಿ $450 ದಶಲಕ್ಷದ ದಾಖಲೆ ಬೆಲೆಗೆ ಮಾರಾಟ ಮಾಡಲಾಗಿತ್ತು. ಸೌದಿ ಸುಲ್ತಾನ ಮನೆತನದ ವ್ಯಕ್ತಿಯೊಬ್ಬರು ಇದನ್ನು ಖರೀದಿ ಮಾಡಿದ್ದರು. ಲಿಯನಾರ್ಡೋ ಶಾಲೆಯ ಈ ಪೇಂಟಿಂಗ್ ಅನ್ನು ನೇಪಲ್ಸ್ನ ಸ್ಯಾನ್ ಡೊಮೆನಿಕೋ ಮ್ಯಾಗಿಯೋರೆ ಬೆಸಿಲಿಕಾದಲ್ಲಿ ಇರಿಸಲಾಗಿತ್ತು.