alex Certify ಕಳುವಾಗಿದ್ದ ಪುರಾತನ ಪೇಂಟಿಂಗ್‌ ಪತ್ತೆ ಮಾಡಿದ ಇಟಾಲಿಯನ್ ಪೊಲೀಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಳುವಾಗಿದ್ದ ಪುರಾತನ ಪೇಂಟಿಂಗ್‌ ಪತ್ತೆ ಮಾಡಿದ ಇಟಾಲಿಯನ್ ಪೊಲೀಸ್

Italian Police Recovers Stolen Copy of Leonardo da Vinci's 'Salvator Mundi'

ಇಟಲಿಯ ನೇಪಲ್ಸ್ ಚರ್ಚ್‌ನಿಂದ ಕಳುವು ಮಾಡಲಾಗಿದ್ದ ಲಿಯನಾರ್ಡೋ ಡಾ ವಿಂಚಿಯ ಏಸು ಕ್ರಿಸ್ತನ ’ಸಲ್ವಾಟಾರ್‌ ಮುಂಡಿ’ ಪೇಂಟಿಂಗ್ ಅನ್ನು ಪೊಲೀಸರು ಪತ್ತೆ ಮಾಡಿದ್ದಾರೆ.

16ನೇ ಶತಮಾನದ ಈ ಪೇಂಟಿಂಗ್ ಚರ್ಚ್‌ನಿಂದ ಕಳುವಾಗಿದೆ ಎಂಬ ವಿಷಯ ಖುದ್ದು ಚರ್ಚ್‌ನ ಪಾದ್ರಿಗಳಿಗೇ ಗೊತ್ತಿರಲಿಲ್ಲ. ಈ ಪೇಂಟಿಂಗ್ ಅಪಾರ್ಟ್ಮೆಂಟ್‌ ಒಂದರಲ್ಲಿ ಬಚ್ಚಿಡಲಾಗಿದ್ದು, ಪೊಲೀಸರ ಕಣ್ಣಿಗೆ ಬಿದ್ದಿದೆ. ಈ ಪೇಂಟಿಂಗ್ ‌ಅನ್ನು ಹಾಗೇ ಸುಮ್ಮನೇ ಮಾರ್ಕೆಟ್‌ನಿಂದ ತಂದಿದ್ದಾಗಿ ಅಪಾರ್ಟ್ಮೆಂಟ್‌ ಮಾಲೀಕ ಕೊಟ್ಟ ಸಮಜಾಯಿಷಿಯಿಂದ ಸಮಾಧಾನಗೊಳ್ಳದ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ.

ಲಿಯನಾರ್ಡೋರ ಸಲ್ವಾಟರ್‌ ಮುಂಡಿ (ಜಗದ ರಕ್ಷಕ) ಕಾಪಿಯಾದ ಈ ಪೇಂಟಿಂಗ್‌ ಅನ್ನು 2017ರಲ್ಲಿ $450 ದಶಲಕ್ಷದ ದಾಖಲೆ ಬೆಲೆಗೆ ಮಾರಾಟ ಮಾಡಲಾಗಿತ್ತು. ಸೌದಿ ಸುಲ್ತಾನ ಮನೆತನದ ವ್ಯಕ್ತಿಯೊಬ್ಬರು ಇದನ್ನು ಖರೀದಿ ಮಾಡಿದ್ದರು. ಲಿಯನಾರ್ಡೋ ಶಾಲೆಯ ಈ ಪೇಂಟಿಂಗ್ ಅನ್ನು ನೇಪಲ್ಸ್‌ನ ಸ್ಯಾನ್ ಡೊಮೆನಿಕೋ ಮ್ಯಾಗಿಯೋರೆ ಬೆಸಿಲಿಕಾದಲ್ಲಿ ಇರಿಸಲಾಗಿತ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...