alex Certify ಜೈಲು ಸೇರುವಂತೆ ಮಾಡ್ತು ಕುಖ್ಯಾತ ಆರೋಪಿಯ ಅಡುಗೆ ಮಾಡುವ ಖಯಾಲಿ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜೈಲು ಸೇರುವಂತೆ ಮಾಡ್ತು ಕುಖ್ಯಾತ ಆರೋಪಿಯ ಅಡುಗೆ ಮಾಡುವ ಖಯಾಲಿ….!

ತಮ್ಮ ಪಾಕ ಪ್ರಾವೀಣ್ಯತೆಯನ್ನ ಸೋಶಿಯಲ್​ ಮೀಡಿಯಾದಲ್ಲಿ ತೋರಿಸಿಕೊಳ್ಳೋದು ಈಗೇನು ಹಳೆಯ ವಿಚಾರವಾಗಿ ಉಳಿದುಕೊಂಡಿಲ್ಲ. ಯುಟ್ಯೂಬ್​ಗಳಲ್ಲಿ ಈಗಾಗಲೇ ಸಾಕಷ್ಟು ಅಡುಗೆ ಸಂಬಂಧಿ ಚಾನೆಲ್​ಗಳಿದ್ದು ಇದರಲ್ಲಿ ನಮಿಗಷ್ಟದ ವಿಡಿಯೋಗಳನ್ನ ನೋಡಬಹುದಾಗಿದೆ.

ಆದರೆ ಇಟಲಿಯ ಮಾಫಿಯಾ ಲೋಕದ ಆರೋಪಿಗೆ ಈ ಅಡುಗೆ ಹವ್ಯಾಸವೇ ಆತನನ್ನ ಕಂಬಿ ಎಣಿಸುವಂತೆ ಮಾಡಿದೆ. ಮಾರ್ಕ್ ಫೆರೆನ್​ ಕ್ಲೌಡ್​ ಬಿಯರ್ಟ್​ ಎಂಬಾತನನ್ನ ಪೊಲೀಸರು ಬಂಧಿಸಿದ್ದಾರೆ.

ಬಿಯರ್ಟ್​ ಯುಟ್ಯೂಬ್​ನಲ್ಲಿ ಚಾನೆಲ್​ವೊಂದನ್ನ ಹೊಂದಿದ್ದು ತನ್ನ ಪಾಕ ಪ್ರಾವೀಣ್ಯತೆಯನ್ನ ಇದರಲ್ಲಿ ತೋರಿಸಿಕೊಳ್ತಿದ್ದ. ಈತ ಮಾಫಿಯಾ ಲೋಕದ ಕ್ರಿಮಿನಲ್​ ಆಗಿದ್ದರಿಂದ ವಿಡಿಯೋಗಳಲ್ಲಿ ತನ್ನ ಮುಖವನ್ನ ತೋರಿಸುತ್ತಿರಲಿಲ್ಲ. ಆದರೆ ಆತನ ದೇಹದ ಮೇಲಿದ್ದ ಟ್ಯಾಟೂಗಳು ಕಾಣಿಸಿದ್ದರಿಂದ ಪೊಲೀಸರು ಇದೇ ಕ್ಲೂವನ್ನ ಹಿಡಿದುಕೊಂಡು ಆರೋಪಿಯನ್ನ ಬಂಧಿಸಿದ್ದಾರೆ.

ಇಟಾಲಿಯನ್ ಪಾಕ ಪದ್ಧತಿಯ ಮೇಲಿನ ಆಸಕ್ತಿ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯನಾಗಿದ್ದುದೇ ಆರೋಪಿಗೆ ಮುಳುವಾಯ್ತು. ಇದು ಮಾತ್ರವಲ್ಲದೇ ಆತನ ಮೈಮೇಲೆ ಇದ್ದ ಮಚ್ಚೆ ಪರಾರಿಯಾದವನನ್ನ ಹುಡುಕಿಕೊಟ್ಟಿದೆ ಎಂದು ಪೊಲೀಸರು ಹೇಳಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...