alex Certify OMG: ಸೂರ್ಯನ ಬೆಳಕಿಲ್ಲದ ಗುಹೆಯಲ್ಲಿ 40 ದಿನ ವಾಸ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

OMG: ಸೂರ್ಯನ ಬೆಳಕಿಲ್ಲದ ಗುಹೆಯಲ್ಲಿ 40 ದಿನ ವಾಸ

ಫೋನ್​ಗಳು, ಗಡಿಯಾರ ಹಾಗೂ ಸೂರ್ಯನ ಬೆಳಕು ಇದೆಲ್ಲದರಿಂದ ಸಂಪರ್ಕ ಕಡಿದುಕೊಂಡು ಫ್ರಾನ್ಸ್​ನ ನೈಋತ್ಯದಲ್ಲಿರುವ ಗುಹೆಯಲ್ಲಿ ಬರೋಬ್ಬರಿ 40 ದಿನಗಳ ಕಾಲ ಇದ್ದ ಸ್ವಯಂ ಸೇವಕರು ಇಲ್ಲಿಂದ ಹೊರ ಬಂದಿದ್ದು ಈ ಅನುಭವ ಅತ್ಯದ್ಭುತವಾಗಿತ್ತು ಎಂದು ಹೇಳಿದ್ದಾರೆ.

ಡೀಪ್​ ಟೈಮ್​ ಎಂಬ ಪ್ರಾಜೆಕ್ಟ್​ನ ಅಡಿಯಲ್ಲಿ 8 ಮಂದಿ ಪುರುಷರು ಹಾಗೂ 7 ಮಂದಿ ಮಹಿಳೆಯರು ಲಾಂಬ್ರಿವೈವ್ಸ್ ಎಂಬ ಗುಹೆಯಲ್ಲಿದ್ದರು. ಹ್ಯೂಮನ್​ ಅಡಾಪ್ಶನ್​ ಇನ್​ಸ್ಟಿಟ್ಯೂಟ್​ನ ಬರೋಬ್ಬರಿ 1.4 ಮಿಲಿಯನ್​ ಡಾಲರ್​ ಮೌಲ್ಯದಲ್ಲಿ ಈ ಪ್ರಾಜೆಕ್ಟ್​ ನಡೆಸಿದೆ. ಈ ಪ್ರಾಜೆಕ್ಟ್​ ರವಿವಾರ ಅಂತ್ಯಗೊಂಡಿದೆ.

ಮೊಬೈಲ್ ಫೋನ್ ಬಳಕೆದಾರರಿಗೆ ಏರ್ಟೆಲ್ ನಿಂದ ಮಹತ್ವದ ಎಚ್ಚರಿಕೆ

ಈ ಪ್ರಾಜೆಕ್ಟ್​ನ ಅಡಿಯಲ್ಲಿ 14 ಮಂದಿ ಸ್ವಯಂ ಸೇವಕರು ಕೈಯಿಂದ ನಿರ್ಮಾಣ ಮಾಡಿದ್ದ ಟೆಂಟ್​​ನಲ್ಲಿ ವಾಸವಿದ್ದರು. ಪೆಡಲ್​ ಬೈಕ್​ನ ಸಹಾಯದಿಂದ ತಯಾರಾದ ವಿದ್ಯುತ್​ ಬಳಕೆ ಮಾಡಲು ಅವಕಾಶವಿತ್ತು. ನೀರಿಗಾಗಿ ಅವರು 146 ಅಡಿ ಆಳದ ಬಾವಿಯನ್ನ ಅವಲಂಬಿಸಿದ್ದರು.

ಇವರಿಗೆ ಗಡಿಯಾರವನ್ನ ನೀಡಲಾಗಿರಲಿಲ್ಲ. ಸೂರ್ಯನ ಬೆಳಕು ಕೂಡ ಇಲ್ಲಿಗೆ ಬರುತ್ತಿರಲಿಲ್ಲ. ಈ ಕಠಿಣ ಪರಿಸ್ಥಿತಿಯಲ್ಲಿ ಬರೋಬ್ಬರಿ 40 ದಿನಗಳು ಕಾಲ ಕಳೆದ ಸ್ವಯಂ ಸೇವಕರು ಭಾನುವಾರ ಗುಹೆಯಿಂದ ಹೊರಬಂದಿದ್ದಾರೆ.

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...