ಫೋನ್ಗಳು, ಗಡಿಯಾರ ಹಾಗೂ ಸೂರ್ಯನ ಬೆಳಕು ಇದೆಲ್ಲದರಿಂದ ಸಂಪರ್ಕ ಕಡಿದುಕೊಂಡು ಫ್ರಾನ್ಸ್ನ ನೈಋತ್ಯದಲ್ಲಿರುವ ಗುಹೆಯಲ್ಲಿ ಬರೋಬ್ಬರಿ 40 ದಿನಗಳ ಕಾಲ ಇದ್ದ ಸ್ವಯಂ ಸೇವಕರು ಇಲ್ಲಿಂದ ಹೊರ ಬಂದಿದ್ದು ಈ ಅನುಭವ ಅತ್ಯದ್ಭುತವಾಗಿತ್ತು ಎಂದು ಹೇಳಿದ್ದಾರೆ.
ಡೀಪ್ ಟೈಮ್ ಎಂಬ ಪ್ರಾಜೆಕ್ಟ್ನ ಅಡಿಯಲ್ಲಿ 8 ಮಂದಿ ಪುರುಷರು ಹಾಗೂ 7 ಮಂದಿ ಮಹಿಳೆಯರು ಲಾಂಬ್ರಿವೈವ್ಸ್ ಎಂಬ ಗುಹೆಯಲ್ಲಿದ್ದರು. ಹ್ಯೂಮನ್ ಅಡಾಪ್ಶನ್ ಇನ್ಸ್ಟಿಟ್ಯೂಟ್ನ ಬರೋಬ್ಬರಿ 1.4 ಮಿಲಿಯನ್ ಡಾಲರ್ ಮೌಲ್ಯದಲ್ಲಿ ಈ ಪ್ರಾಜೆಕ್ಟ್ ನಡೆಸಿದೆ. ಈ ಪ್ರಾಜೆಕ್ಟ್ ರವಿವಾರ ಅಂತ್ಯಗೊಂಡಿದೆ.
ಮೊಬೈಲ್ ಫೋನ್ ಬಳಕೆದಾರರಿಗೆ ಏರ್ಟೆಲ್ ನಿಂದ ಮಹತ್ವದ ಎಚ್ಚರಿಕೆ
ಈ ಪ್ರಾಜೆಕ್ಟ್ನ ಅಡಿಯಲ್ಲಿ 14 ಮಂದಿ ಸ್ವಯಂ ಸೇವಕರು ಕೈಯಿಂದ ನಿರ್ಮಾಣ ಮಾಡಿದ್ದ ಟೆಂಟ್ನಲ್ಲಿ ವಾಸವಿದ್ದರು. ಪೆಡಲ್ ಬೈಕ್ನ ಸಹಾಯದಿಂದ ತಯಾರಾದ ವಿದ್ಯುತ್ ಬಳಕೆ ಮಾಡಲು ಅವಕಾಶವಿತ್ತು. ನೀರಿಗಾಗಿ ಅವರು 146 ಅಡಿ ಆಳದ ಬಾವಿಯನ್ನ ಅವಲಂಬಿಸಿದ್ದರು.
ಇವರಿಗೆ ಗಡಿಯಾರವನ್ನ ನೀಡಲಾಗಿರಲಿಲ್ಲ. ಸೂರ್ಯನ ಬೆಳಕು ಕೂಡ ಇಲ್ಲಿಗೆ ಬರುತ್ತಿರಲಿಲ್ಲ. ಈ ಕಠಿಣ ಪರಿಸ್ಥಿತಿಯಲ್ಲಿ ಬರೋಬ್ಬರಿ 40 ದಿನಗಳು ಕಾಲ ಕಳೆದ ಸ್ವಯಂ ಸೇವಕರು ಭಾನುವಾರ ಗುಹೆಯಿಂದ ಹೊರಬಂದಿದ್ದಾರೆ.