ಆಕಾಶಕ್ಕೆ ನಾವು ಹಾರಬಹುದು. ಆಕಾಶದಲ್ಲಿ ತೇಲಾಡಲೂಬಹುದು. ಆದರೆ ಎಂದಾದರೂ ಆಕಾಶದಲ್ಲೇ ಮುಳುಗೋದನ್ನ ಅನುಭವ ಮಾಡಿದ್ದೀರಾ..? ಅನುಭವ ಮಾಡೋದು ಹಾಗಿರಲಿ. ಎಂದಾದರೂ ಇಂತಹದ್ದೊಂದು ದೃಶ್ಯವನ್ನಾದರೂ ಕಣ್ತುಂಬಿಕೊಂಡಿದ್ದೀರಾ..?
ಸದ್ಯ ಇಂತಹದ್ದೊಂದು ವಿಚಿತ್ರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದು ವೈರಲ್ ಆಗೋದು ಮಾತ್ರವಲ್ಲದೇ ನೆಟ್ಟಿಗರ ನಡುವಿನ ಚರ್ಚಾ ವಿಷಯವಾಗಿ ಬದಲಾಗಿದೆ.
ಯುದ್ಧ ವಿರಾಮದ ಬಳಿಕವೂ ನಿಲ್ಲದ ಸಂಘರ್ಷ: ಇಸ್ರೆಲ್ – ಪ್ಯಾಲೆಸ್ತಿನ್ ಪ್ರತಿಭಟನಾಕಾರರ ನಡುವೆ ನ್ಯೂಯಾರ್ಕ್ ನಲ್ಲಿ ಘರ್ಷಣೆ
ಕಪ್ಪು ಬಣ್ಣದ ಧಿರಿಸನ್ನ ಧರಿಸಿದ್ದ ವ್ಯಕ್ತಿಯು ಹಿಂಬದಿ ನೆಗತದ ಮೂಲಕ ಎತ್ತರದ ಸ್ಥಳದಿಂದ ಕೆಳಕ್ಕೆ ಜಿಗಿಯುತ್ತಾನೆ. ಈ ದೃಶ್ಯವನ್ನ ನೋಡುವಾಗ ನಿಮಗೆ ಆತನ ಕೆಳಗೆ ಆಕಾಶವಿದೆ ಎಂದೆನಿಸುತ್ತೆ. ಇದಾದ ಬಳಿಕ ಆತ ಆ ಆಕಾಶದ ಮಾದರಿಯ ರಚನೆಯಲ್ಲಿ ಮುಳುಗಿ ಹೋಗಿದ್ದಾನೆ. ಅನೇಕರು ಇದೊಂದು ರಿವರ್ಸ್ ಮಾಡಿರುವ ವಿಡಿಯೋ ಎಂದು ವಾದಿಸಿದ್ದಾರೆ. ಆದರೆ ಆತ ಆಕಾಶದ ಪ್ರತಿಫಲನವನ್ನ ಹೊಂದಿದ್ದ ಸಮುದ್ರಕ್ಕೆ ಜಿಗಿದಿದ್ದಾನೆ.
ಈ ವೈರಲ್ ವಿಡಿಯೋ ನೆಟ್ಟಿಗರ ತಲೆಗೆ ಹುಳಬಿಟ್ಟಿದೆ. ಈ ವಿಡಿಯೋವನ್ನ ಜರ್ಮನಿಯ ಒಸ್ಟಾಲ್ಗು ಎಂಬಲ್ಲಿ ಚಿತ್ರೀಕರಿಸಲಾಗಿದೆ. ಅಲ್ಲಿ ಆಲ್ಪ್ಸೀ ಎಂಬ ಒಂದು ಪ್ರಸಿದ್ಧ ನದಿ ಇದೆ. ಈ ನದಿಯು ಎಷ್ಟು ತಿಳಿಯಾಗಿದೆ ಎಂದರೆ ಆಕಾಶದಲ್ಲಿರುವ ಮೋಡಗಳ ಚಿತ್ರಕೂಡ ನೀರಿನಲ್ಲಿ ಪ್ರತಿಫಲನವಾಗುತ್ತದೆ. ಇದೇ ಕಾರಣಕ್ಕೆ ಆತ ಆಕಾಶ ಒಳಕ್ಕೆ ಮುಳುಗಿದಂತೆ ಭಾಸವಾಗಿದೆ. ಅಂದಹಾಗೆ ಈ ದೃಷ್ಟಿಭ್ರಮೆಯ ವಿಡಿಯೋ ಬಗ್ಗೆ ನಿಮಗೆ ಏನೆನಿಸಿತು..?
https://youtu.be/YRADrpPpPdg?t=1