ಕಿರಿಕಿರಿ ಪ್ರಶ್ನೆಗಳನ್ನು ಕೇಳಿದ ಪತ್ರಕರ್ತರ ಮೇಲೆ ಸಿಟ್ಟಾದ ಥಾಯ್ಲೆಂಡ್ ಪ್ರಧಾನ ಮಂತ್ರಿ ಪ್ರಯುತ್ ಚನ್-ಒಚಾ ಪತ್ರಿಕಾಗೋಷ್ಠಿ ವೇಳೆ ಪತ್ರಕರ್ತರ ಮೇಲೆ ಸ್ಯಾನಿಟೈಸರ್ ಸ್ಪ್ರೇ ಮಾಡಿ ತಮ್ಮ ಕೋಪ ಕಾರಿಕೊಂಡಿದ್ದಾರೆ. ಘಟನೆಯ ವಿಡಿಯೋ ವೈರಲ್ ಆಗಿದೆ.
ಬ್ಯಾಂಕಾಕ್‌ನ ಸರ್ಕಾರೀ ಬಂಗಲೆಯೊಂದರಲ್ಲಿ ನಡೆದ ಈ ಘಟನೆಯಲ್ಲಿ, ನಿವೃತ್ತ ಸೇನಾಧಿಕಾರಿಯೂ ಆದ ಪ್ರಯುತ್, ವರದಿಗಾರರ ಬಳಿ ಹೋಗಿ ಆಲ್ಕೋಹಾಲ್ ಮಿಸ್ಟ್ ಅನ್ನು ಅವರ ಮುಖಗಳ ಮೇಲೆ ಸ್ಪ್ರೇ ಮಾಡಿ ಅಲ್ಲಿಂದ ಎದ್ದು ಹೋಗಿದ್ದಾರೆ. 2014ರಲ್ಲಿ ಸೇನಾ ದಂಗೆ ಆದಾಗಿನಿಂದ ಪ್ರಯುತ್ ಥಾಯ್ಲೆಂಡ್ ಚುಕ್ಕಾಣಿ ಹಿಡಿದಿದ್ದಾರೆ.
ಲೈವ್ ಪ್ಯಾನಲ್ ಚರ್ಚೆ ವೇಳೆ ಹೋಸ್ಟ್ ಮೇಲೆ ಬಿತ್ತು ಟಿವಿ ಸೆಟ್….!
ಏಳು ವರ್ಷಗಳ ಹಿಂದೆ ಸರ್ಕಾರದ ವಿರುದ್ಧ ದಂಗೆ ಎದ್ದ ಕಾರಣಕ್ಕೆ ತಮ್ಮ ಸಂಪುಟದ ಮೂವರು ಮಂತ್ರಿಗಳನ್ನು ಜೈಲಿಗೆ ಅಟ್ಟಿದ ಬಳಿಕ ಅವರ ಸ್ಥಾನಕ್ಕೆ ಯಾರನ್ನು ತರಲಾಗುವುದು ಎಂದು ಪ್ರಶ್ನಿಸಿದಾಗ ಪ್ರಯುತ್‌ಗೆ ಇರುಸುಮುರುಸಾಗಿ ಹೀಗೆ ಮಾಡಿದ್ದಾರೆ ಎಂದು ಸ್ಟ್ರೇಟ್ ಟೈಮ್ಸ್‌ನಲ್ಲಿ ವರದಿಯಾಗಿದೆ.